ನಿನಗೆ ತಾಕತ್ತಿದ್ದರೇ ನಾಯಕತ್ವ ಬದಲಾವಣೆ ಮಾಡು- ಶಾಸಕ ಎಂ.ಪಿ ರೇಣುಕಾಚಾರ್ಯ ಸವಾಲು… ಬೆಂಗಳೂರು,ಮೇ,27,2021(..):ಕೊರೋನಾ 2ನೇ ಅಲೆ ಸಂಕಷ್ಟದ ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದ್ದು, ಸಿಎಂ ಬದಲಾವಣೆಗೆ ತೆರೆಮರೆಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಇನ್ನು ಈ ವಿಚಾರದಲ್ಲಿ ಸಚಿವ ಸಿ.ಪಿ ಯೋಗೇಶ್ವರ್ ಹೆಸರು ಕೇಳಿ ಬಂದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ನಿನಗೆ ತಾಕತ್ತಿದ್ದರೇ ನಾಯಕತ್ವ ಬದಲಾವಣೆ ಮಾಡು ಎಂದು ಸಚಿವ ಸಿ.ಪಿ ಯೋಗೇಶ್ವರ್ ಗೆ ಸವಾಲು ಹಾಕಿದ್ದಾರೆ. ಇದೇ ವೇಳೆ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಹರಿಹಾಯ್ದಿರುವ ಅವರು, ಮೆಗಾಸಿಟಿಯಲ್ಲಿ ಏನೇನು ಹಗರಣ ಮಾಡಿದ್ದಾರೆ ಅಂತಾ ಗೊತ್ತು. ನಾಯಕತ್ವ ಬದಲಾವಣೆ ಮಾಡಿದರೇ ಬೆಂಕಿ ಹೊತ್ತಿ ಉರಿಯುತ್ತದೆ. ಸಿ.ಪಿ ಯೋಗೇಶ್ವರ್ 420 ಎಂದು ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. : – –- ---