ಮಂಡ್ಯ ಜಿಲ್ಲಾಸ್ಪತ್ರೆ ವಾರ್ಡ್ ಮುಂದೆಯೇ ಹೆರಿಗೆ: ಮಗು ಸಾವು: ಸಿಬ್ಬಂದಿ ವಿರುದ್ಧ ಕುಟುಂಬಸ್ಥರ ಆಕ್ರೋಶ… ಮಂಡ್ಯ,ಮೇ,26,2021(..):ಜಿಲ್ಲಾಸ್ಪತ್ರೆಯ ವಾರ್ಡ್ ಮುಂದೆಯೇ ಹೆರಿಗೆಯಾಗಿ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆ ನೋವು ಹಿನ್ನೆಲೆ ಗರ್ಭಿಣಿ ಮಹಿಳೆ ಸೋನು ಆಸ್ಪತ್ರೆಗೆ ಬಂದಿದ್ದರು. ಆದರೆ ಕೋವಿಡ್ ಟೆಸ್ಟ್ ವರದಿ ಇಲ್ಲದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ್ದಾರೆ. ಈನಡುವೆ 2 ಗಂಟೆಗಳ ಕಾಲ ಆಸ್ಪತ್ರೆಯ ವಾರ್ಡ್ ಮುಂದೆಯೇ ಗರ್ಭಿಣಿ ನರಳಾಡಿದ್ದು, ನಂತರ ವಾರ್ಡ್ ಮುಂದೆಯೇ ಹೆರಿಗೆಯಾಗಿ , ಮಗು ಸಾವನ್ನಪ್ಪಿದೆ. ಇನ್ನು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. : - -- – - - - -