ನಮ್ಮ ಮೆಟ್ರೋ ಹಂತ 2 ರೀಚ್‌ 2 ಮಾರ್ಗ ಕಾಮಗಾರಿ ಪರಿಶೀಲಿಸಿದ ಸಿಎಂ ಬಿಎಸ್ ವೈ: ಸಚಿವರಿಂದ ಸಾಥ್… ಬೆಂಗಳೂರು,ಮೇ,25,2021(..):ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಮೆಟ್ರೋ ಹಂತ 2 ರೀಚ್‌ 2 ಮಾರ್ಗ ಕಾಮಗಾರಿ ಪರಿಶೀಲನೆ ನಡೆಸಿದರು. ಸಿಎಂ ಬಿಎಸ್‌ ಯಡಿಯೂರಪ್ಪ ಇಂದು ನಾಯಂಡಳ್ಳಿ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ನಮ್ಮ ಮೆಟ್ರೋ ಹಂತ 2 ರೀಚ್‌ 2 ಮಾರ್ಗ ಪರಿಶೀಲನೆ ನಡೆಸಿದರು. ವಿಧಾನಸೌಧದ ಅಂಬೇಡ್ಕರ್‌ ನಿಲ್ದಾಣದಿಂದ ಮೆಟ್ರೋನಲ್ಲಿ ತೆರಳಿ ಖುದ್ದು ಪರಿಶೀಲನೆ ನಡೆಸಿದರು. ಇನ್ನು ಸಿಎಂ ಬಿಎಸ್ ಯಡಿಯೂರಪ್ಪಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌, ಆಶೋಕ್‌, ಸಹಕಾರ ಸಚಿವ ಸೋಮಶೇಖರ್‌, ವಸತಿ ಸಚಿವ ಸೋಮಣ್ಣ ಸಾಥ್‌ ನೀಡಿದರು. ಶೇ.80ರಷ್ಟು ಕಾಮಗಾರಿ ಈಗಾಗಲೇ ಮುಕ್ತಾಯವಾಗಿದೆ. : - - 2 2 - -