ಚಿತ್ರದ ಸ್ಯಾಟ್’ಲೈಟ್, ಡಿಜಿಟಲ್ ರೈಟ್ಸ್ 325 ಕೋಟಿ ಗೆ ಸೇಲ್! ಬೆಂಗಳೂರು, ಮೇ 25, 2021 (..):ಆರ್​​ಆರ್​ಆರ್​​ ಚಿತ್ರದ ಸ್ಯಾಟ್’ಲೈಟ್ ರೈಟ್ಸ್ ಹಾಗೂ ಡಿಜಿಟಲ್​ ರೈಟ್ಸ್​​ 325 ಕೋಟಿ ಗೆ ಮಾರಾಟವಾಗಿದೆ ಎನ್ನಲಾಗಿದೆ. ರಿಲೀಸ್​ಗೂ ಮುನ್ನವೇ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಮೊದಲ ಚಿತ್ರ ಆರ್​​ಆರ್​ಆರ್‌ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಹೌದು. ರಾಜ​ಮೌಳಿ ನಿರ್ದೇಶನದ ರಾಮ್ ಚರಣ್ ಹಾಗೂ ಜೂನಿಯರ್​ ಎನ್​ಟಿಆರ್ ನಟನೆಯ ಬಿಗ್ ಬಜೆಟ್ ಚಿತ್ರ ಗಳಿಕೆಯಲ್ಲೂ ಹೊಸ ದಾಖಲೆ ಬರೆದಿದೆ. ಅಕ್ಟೋಬರ್​ 13ರಂದು ತೆರೆಗೆ ಬರೋಕ್ಕೆ ರೆಡಿಯಾಗಿರುವ ಚಿತ್ರದ ಸ್ಯಾಟಲೈಟ್ ರೈಟ್ಸ್ ಹಾಗೂ ಡಿಜಿಟಲ್​ ರೈಟ್ಸ್​​ 325 ಕೋಟಿ ಗೆ ಸೇಲ್ ಆಗಿದೆ. ಚಿತ್ರದ ಎಲ್ಲಾ ಭಾಷೆಗಳ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳು, ಜೀ ನೆಟ್ವರ್ಕ್​ಗೆ ಸೇಲ್ ಆಗಿದ್ದು, ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಸೇರಿದಂತೆ ಇತರ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ.