2000 ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿದ ಬಿಸಿಸಿಐ ಬೆಂಗಳೂರು, ಮೇ 25, 2021 (..):ಬಿಸಿಸಿಐ ಆಮ್ಲಜನಕದ 2000 ಕಾನ್ಸಂಟ್ರೇಟರ್‌ಗಳನ್ನು ದೇಣಿಗೆ ಕೊಡಲು ಮುಂದಾಗಿದೆ. ಹೌದು. ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ದೇಶದ ಜನರ ನೆರವಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಂದಿದೆ. ಕಳೆದ ವರ್ಷ ಕೋವಿಡ್ ಸಾಂಕ್ರಮಿಕದ ಮೊದಲ ಅಲೆ ದೇಶವನ್ನು ತಲ್ಲಣಗೊಳಿಸಿದ್ದ ವೇಳೆ ಬಿಸಿಸಿಐ 51 ಕೋಟಿ ರೂ.ಗಳ ದೇಣಿಗೆಯನ್ನು ಪಿಎಂ-ಕೇರ್ಸ್ ನಿಧಿಗೆ ನೀಡಿತ್ತು. ಸದ್ಯ ವೈದ್ಯಕೀಯ ಸಲಕರಣೆಗಳ ತುರ್ತು ಅಗತ್ಯ ಅರಿತ ಬಿಸಿಸಿಐ ದೇಶಾದ್ಯಂತ ಇರುವ ಬೇಡಿಕೆ-ಪೂರೈಕೆ ನಡುವೆ ಇರುವ ಅಂತರ ತಗ್ಗಿಸಲು ನೆರವಾಗಲಿದೆ. ಇದಕ್ಕಾಗಿ ಆಮ್ಲಜನಕದ 2000 ಕಾನ್ಸಂಟ್ರೇಟರ್‌ಗಳನ್ನು ದೇಣಿಗೆ ನೀಡುತ್ತಿದೆ.