ಮೈಸೂರು ಜಿಲ್ಲೆಯಲ್ಲಿ ಕೋವಿಡ್ ನಿಂದ ಕಳೆದ ವಾರ ಮೃತಪಟ್ಟವರ ಸ್ಟೇಟಸ್ ರಿಪೋರ್ಟ್ .. ಮೈಸೂರು, ಮೇ 23, 2021 : (.. ) ರಾಜ್ಯದಲ್ಲಿ ಕಳೆದ 7 ದಿನಗಳಲ್ಲಿ ಕೋವಿಡ್ ಪ್ರಕರಣದಿಂದ ಸಾವು ಸಂಭವಿಸಿದ ಪ್ರಮಾಣ ಮೈಸೂರು ಜಿಲ್ಲೆಯಲ್ಲಿ ಇಳಿಕೆಯಾಗಿದ್ದು, ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಕರೋನಾ ನಿಯಂತ್ರಣದ ಬಗ್ಗೆ ಆಶಾಭಾವ ಮೂಡಿಸಿದೆ. ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ಮಾಹಿತಿಯನ್ನು ಆಧಾರಿಸಿ ಮಾಧ್ಯಮಗಳಿಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಂಕಿ-ಅಂಶಗಳ ಬಿಡುಗಡೆ ಮಾಡಿದ್ದಾರೆ. ಈ ಮಾಹಿತಿ ಅನ್ವಯ, ಮೊದಲ ಮೂರು ಸ್ಥಾನದಲ್ಲಿ ಶೇ 3.81 ರಷ್ಟು ಸಾವಿನ ಪ್ರಮಾಣ ಹೊಂದಿರುವ ಹಾವೇರಿ ಮೊದಲ ಸ್ಥಾನದಲ್ಲಿ, ಶೇ.3.14 ಪ್ರಮಾಣದ ಬೀದರ್ ಎರಡನೇ ಸ್ಥಾನ ಹಾಗೂ ಶೇ.2.59 ಪ್ರಮಾಣದ ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನದಲ್ಲಿದೆ.ಶೇ 0.58 ಸಾವಿನ ಪ್ರಮಾಣ ಹೊಂದಿರುವ ಮೈಸೂರು ಜಿಲ್ಲೆ, ಆ ಮೂಲಕ ಕಡಿಮೆ ಸಾವಿನ ಪ್ರಕರಣ ದಾಖಲಿಸಿದೆ. : -----