ಇಂದು ಬೆಳ್ಳಂಬೆಳಗ್ಗೆ ಮಣಿಪುರದಲ್ಲಿ ಭೂಕಂಪನ ಬೆಂಗಳೂರು, ಮೇ 23, 2021 (..):ಮಣಿಪುರದ ಉಕ್ರುಲ್ ನಲ್ಲಿ ಭೂಕಂಪನ ಸಂಭವಿಸಿದೆ. ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 4.3 ರಷ್ಟು ತೀವ್ರತೆ ದಾಖಲಾಗಿದೆ. ಈ ಸಂಬಂಧ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. ಬೆಳಗ್ಗೆ 6.56 ಸಮಯದಲ್ಲಿ ಮಣಿಪುರದ ಉಕ್ರುಲ್ ನಲ್ಲಿ ರಿಕ್ಟರ್ ಮಾಪಕದಲ್ಲಿ 4.3 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ. 109 ಕಿ.ಮೀ ಆಳದಲ್ಲಿ ಉಕ್ರುಲ್ ನ ಪೂರ್ವ-ಆಗ್ನೇಯಕ್ಕೆ 49 ಕಿ.ಮೀ ಭೂಕಂಪ ಸಂಭವಿಸಿದೆ. ಕೊರೊನಾ ಸಂಕಷ್ಟದ ನಡುವೆ ಭೂ ಕಂಪನ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.