ಪತ್ರಿಕೆ ಹಂಚುವ ಯುವಕರಿಗೆ ಕರೋನಾ ಕವಚ ವಿಮೆಯ ಒಂದು ಲಕ್ಷ ರೂ.ಗಳ ಬಾಂಡ್ ವಿತರಣೆ… ಮೈಸೂರು,ಮೇ,22,2021(..):ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿಮಂಜು ಅವರ ಹುಟ್ಟು ಹಬ್ಬದ ಅಂಗವಾಗಿ ಅಸಂಘಟಿತ ವಲಯದಲ್ಲಿ ಕಾಯಕ ಮಾಡುವ ಮನೆ ಮನೆಗಳಿಗೆ ಪತ್ರಿಕೆ ಹಂಚುವ ಯುವಕರಿಗೆ ಕರೋನಾ ಕವಚದ ಒಂದು ಲಕ್ಷರೂ ಗಳ ಬಾಂಡ್ ವಿತರಣೆ ಮಾಡಲಾಯಿತು. ಈ ಬಗ್ಗೆ ಮಾತನಾಡಿದ ಜೋಗಿಮಂಜು, ಶ್ರಮಿಕವರ್ಗ, ಅಸಂಘಟಿತ ವಲಯ, ಸ್ವಾಭಿಮಾನಿ ಕಾಯಕವಾದ ಹಾಗೂ ಕೋವಿಡ್ 2.0 ನಾ ಸಂಧರ್ಭದಲ್ಲಿ ಕರೋನ ವಾರಿಯರ್ಸ್‌ ಗಳನ್ನು ಗುರುತಿಸಿ ಸುಮಾರು 20 ಜನರಿಗೆ ಉಚಿತವಾಗಿ ಕರೋನಾ ಕವಚದ ಒಂದು ಲಕ್ಷ. ರೂಗಳ ಬಾಂಡ್ ವಿತರಣೆ ಮಾಡುವ ಮೂಲಕ ಅಚರಿಸುತ್ತಿರುವುದು ಆತ್ಮ ತೃಪ್ತಿ ಇದೆ ಎಂದು ತಿಳಿಸಿದರು. ಪತ್ರಿಕೆ ಹಂಚುವ ಯುವಕರುಗಳು ದಿನನಿತ್ಯ ಬೆಳ್ಳಗೆ ಮನೆ ಮನೆಗಳಿಗೆ ತೆರಳಿ ವಿಶ್ವದ ಎಲ್ಲ ಸುದ್ದಿಗಳನ್ನು ನಾಗರೀಕರಿಗೆ ಮುಟ್ಟಿಸುತ್ತಾರೆ. ಇವರುಗಳಿಗೆ ಕೋವಿಡ್ ರೋಗ ತಗಲಿದ ಸಂಧರ್ಭದಲ್ಲಿ ಅವರುಗಳಿಗೆ ಯಾವುದೇ ವಿಮೆ ಭದ್ರತೆ, ಪ್ರಾವಿಡೆಂಟ್ ಫಂಡ್, ರಾಜ್ಯ ಕಾರ್ಮಿಕರ ವಿಮೆ ಯಾವುದು ಇಲ್ಲ, ಈಗ ಕೊಡುತ್ತಿರುವ #ಕೋವಿಡ್ ಕವಚ ವಿಮೆಯು ಸುಮಾರು 5 ಲಕ್ಷದವರೆಗೂ ಸವಲತ್ತುಗಳನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬಹುದು. ಈ ಸಂಧರ್ಭದಲ್ಲಿ ಯುವ ಮೋರ್ಚಾ ಉಪಾಧ್ಯಕ್ಷ ನಿಶಾಂತ್, ಹಿಂದುಳಿದ ವರ್ಗಗಳ ಮೊರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲ್, ಆಟೋ ಮಾಲೀಕರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಸತ್ಯ, ಪ್ರಶಾಂತ್, ಗಿರೀಶ್, ರಾಜೇಶ್, ಇದ್ದರು. : - -- – - -