: ಚಾ.ನಗರ ಆಕ್ಸಿಜನ್ ದುರಂತದ ಮೃತ ಕುಟುಂಬಗಳಿಗೆ ತಕ್ಷಣ 2 ಲಕ್ಷ ರೂ.ಪರಿಹಾರ ನೀಡಿ : ಹೈಕೋರ್ಟ್ ಸೂಚನೆ. ಬೆಂಗಳೂರು, ಮೇ 20, 2021 : (.. )ಚಾಮರಾಜನಗರ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರಿಗೆ ಪರಿಹಾರ ನೀಡಲು ಕೋರ್ಟ್ ಆದೇಶ.24 ಮೃತರ ಸಂಬಂಧಿಕರಿಗೆ ತಕ್ಷಣಕ್ಕೆ 2 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೈಕೋರ್ಟ್ ಗೆ ಎಜಿ ಪ್ರಭುಲಿಂಗ್ ನಾವದಗಿ ಹೇಳಿಕೆ.ಚಾಮರಾಜನಗರ ಆಕ್ಸಿಜನ್ ದುರ್ಘಟನೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನೀಡಿದ್ದ ವರದಿ ಮೇರೆಗೆ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಿತು.ಈ ವೇಳೆ ನ್ಯಾಯಾಲಯ, ನೀವು ನಿರ್ಧರಿಸಿರುವ ಪರಿಹಾರ ಹಣವನ್ನು ತಕ್ಷಣ ನೀಡಿ. ಪರಿಹಾರದ ಪ್ರಮಾಣದ ಬಗ್ಗೆ ನಂತರ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. : -----2lakhs---