ಮಕ್ಕಳೇ ಹೇಗಿದ್ದೀರಿ?, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪತ್ರ ಬರೆದ ಮೈಸೂರು ಸೌತ್ ಬಿಇಒ ಯೋಗಕ್ಷೇಮ,ಆತ್ಮಸ್ಥೈರ್ಯತುಂಬುವಂತಹಕೆಲಸಮಾಡಿದಶಿಕ್ಷಣಾಧಿಕಾರಿಮೈಸೂರು:ಮಕ್ಕಳೇ ಹೇಗಿದ್ದೀರಿ? ಮನೆಯಲ್ಲೇ ಇದ್ದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದೀರಿ ಎಂಬ ನಂಬಿಕೆ ಇದೆ. ಅದೇ ರೀತಿ ಮುಂದಿನ ತಿಂಗಳು ಜೂನ್ನಲ್ಲಿ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಜ್ಜಾಗಿದ್ದೀರಾ? ಮಾದರಿ ಪ್ರಶ್ನೆ ಪತ್ರಿಕೆ ಅಭ್ಯಾಸ ಮಾಡಿದ್ದೀರಾ?ಲಾಕ್ಡೌನ್ ಹಾಗೂ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಕಳೆದ ಕೆಲ ತಿಂಗಳಿನಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಪರ್ಕ ಸ್ವಲ್ಪ ಮಟ್ಟಿಗೆ ಕಡಿತಗೊಂಡಿತ್ತು. ಹಾಗಾಗಿ ಮಕ್ಕಳ ಮನಸ್ಸನ್ನು ಮತ್ತೆ ಪರೀಕ್ಷೆ ಕಡೆಗೆ ಕೊಂಡೊಯ್ಯುವ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಕೆಲಸಕ್ಕೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಾಮಾರಾಧ್ಯ ಮುಂದಾಗಿದ್ದಾರೆ. ತಮ್ಮ ಕ್ಷೇತ್ರದ ಪ್ರತಿಯೊಬ್ಬ ವಿದ್ಯಾಥರ್ಿಗೂ ಪತ್ರ ಬರೆದು ಯೋಗಕ್ಷೇಮ ವಿಚಾರಿಸುತ್ತಿದ್ದು, ಪರೀಕ್ಷೆಗೆ ಹೇಗೆಲ್ಲ ತಯಾರಿ ನಡೆಸಬೇಕೆಂದು “ಪ್ರೇರಣಾ ನುಡಿ”ಗಳನ್ನಾಡಿದ್ದಾರೆ. ಆ ಮೂಲಕ ವಿನೂತನ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದಾರೆ. “ತಾವೆಲ್ಲರೂ ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಯ ನಿರೀಕ್ಷೆಯಲ್ಲಿರುವಿರಿ. ಬೇರೆಲ್ಲಾ ವರ್ಷಗಳಿಗಿಂತ ಈ ವರ್ಷ ನಿಮಗೆ ಹಾಗೂ ಶಿಕ್ಷಣ ಇಲಾಖೆಗೆ ಅನೇಕ ಸವಾಲುಗಳನ್ನು ತಂದೊಡ್ಡಿದೆ. ಅದನ್ನು ಹೇಗೆ ಮೀರುತ್ತೇವೆ ಎಂಬುದರ ಮೇಲೆ ನಮ್ಮ ಯಶಸ್ಸು ಅಡಗಿದೆ. ಎಸ್ಎಸ್ಎಲ್ಸಿಪರೀಕ್ಷೆಯುನಿಮ್ಮಜೀವನದಲ್ಲಿಒಂದುಮಹತ್ವದಘಟ್ಟ.ಈಪರೀಕ್ಷೆಯನ್ನುಹಬ್ಬವಾಗಿಆಚರಿಸೋಣ.ಯಶಸ್ಸುಪಡೆಯೋಣ.ಇದಕ್ಕಾಗಿನಿಮಗೆಒಂದಿಷ್ಟುಸಲಹೆಗಳನ್ನುನೀಡಲುಈಪತ್ರಬರೆದಿರುವೆ,”ಎಂದುಹುರಿದುಂಬಿಸಿದ್ದಾರೆ.*ಮೊದಲುನಿಮ್ಮಆರೋಗ್ಯವನ್ನುಕಾಪಾಡಿಕೊಳ್ಳಿ,ಯಾವುದೇಸಂದರ್ಭದಲ್ಲೂಉದಾಸೀನಮಾಡದೇಸೋಂಕಿನಿಂದರಕ್ಷಿಸಿಕೊಳ್ಳುವವಿಧಾನಗಳನ್ನುತಪ್ಪದೇಅನುಸರಿಸಿ.ಖುಷಿಯಾಗಿತಂದೆ,ತಾಯಿ,ಕುಟುಂಬದವರೊಡನೆಬೆರೆಯಿರಿ.*ಮನೆಯಲ್ಲೇತಯಾರಿಸಿದಬಿಸಿಯಾದಆಹಾರಸೇವಿಸಿ,ಸಾಧ್ಯವಾದ್ಟುಬಿಸಿನೀರುಕುಡಿಯಿರಿ,ದಿನಕ್ಕೆ 7ತಾಸುಗಳಷ್ಟುನಿದ್ದೆಮಾಡಿ.*ಪರೀಕ್ಷೆಯಾವುದೇಕಾರಣಕ್ಕೂರದ್ದಾಗುವುದಿಲ್ಲಎಂದುದೃಢವಾಗಿನಂಬಿ.ಖುಷಿಯಾಗಿಸ್ವೀಕರಿಸಿ,ಆನಿಟ್ಟಿನಲ್ಲಿಕಾರ್ಯಪ್ರವೃತ್ತರಾಗಿ.*ಅಧ್ಯಯನಮಾಡುವುದಕ್ಕೆಒಂದುಕಲಿಕಾವೇಳಾಪಟ್ಟಿತಯಾರಿಸಿಕೊಳ್ಳಿ (ಈಗಾಗಲೇನಿಮ್ಮಶಾಲೆಯಲ್ಲಿನೀಡಿರಬಹುದು).*ಎಲ್ಲಾವಿಷಯಗಳಿಗೂಗಮನನೀಡಿ.ನಿಮಗೆಕಷ್ಟವೆನಿಸುವವಿಷಯಗಳಿಗೆಹೆಚ್ಚುಒತ್ತುನೀಡಿ.*ಬರೆದುಕಲಿಯುವುದುಹೆಚ್ಚುಪ್ರಯೋಜನಕಾರಿ,ಓದಿದುದನ್ನುಬರೆದುದೃಢಪಡಿಸಿಕೊಳ್ಳಿ.*ವಿರಾಮದಸಮಯದಲ್ಲಿಓಳಾಂಗಣಆಟಗಳನ್ನುಆಡಿ.*ಕಷ್ಟವೆನಿಸುವಅಂಶಗಳನ್ನುನಿಮ್ಮಶಿಕ್ಷಕರೊಡನೆಚರ್ಚಿಸಿ*ಬೆಳಗಿನಸಮಯಅಧ್ಯಯನಕ್ಕೆಪ್ರಶಸ್ತವಾದುದು.ಹಾಗಾಗಿಮುಂಜಾನೆ 5ಕ್ಕೆಎದ್ದುಅಧ್ಯಯನಪ್ರಾರಂಭಿಸಿ.* ಎಸ್ಎಸ್ಎಲ್ಸಿ ಬೋಡರ್್ನ ಎರಡು ಪ್ರಶ್ನೆ ಪತ್ರಿಕೆಗಳು, ಜಿಲ್ಲಾ ಹಂತದ ಮೂರು ಪತ್ರಿಕೆಗಳು ಹಾಗೂ ತಾಲೂಕಿನ “ಪ್ರೇರಣಾ’ಪತ್ರಿಕೆಗಳಿವೆ. ಅಲ್ಲದೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಯಿರಿ.* ನಿಮ್ಮ ಉತ್ತರ ಸ್ಪುಟವಾಗಿ ಸ್ಪಷ್ಟವಾಗಿರಬೇಕು, ಇದನ್ನು ಅಭ್ಯಾಸ ಮಾಡಿ.ನಿಮ್ಮ ಮುಂಬರುವ ಪರೀಕ್ಷೆಯ ಯಶಸ್ಸಿಗಾಗಿ ಹಾಗೂ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳು. ನನ್ನ ಕ್ಷೇತ್ರದಲ್ಲಿ ಸರಕಾರಿ ಶಾಲೆ 9, ಸರಕಾರದಿಂದ ಮಾನ್ಯತೆ ಪಡೆದ ಅನುದಾನಿತ ಶಿಕ್ಷಣ ಸಂಸ್ಥೆ 26, ಅನುದಾನರಹಿತ 48 ಸೇರಿದಂತೆ ಒಟ್ಟು 83 ಶಾಲೆಗಳಿದ್ದು, 4615 ವಿದ್ಯಾಥರ್ಿಗಳಿದ್ದಾರೆ. ಇಷ್ಟೂ ಮಕ್ಕಳಿಗೆ ಪತ್ರ ಬರೆದು ಆತ್ಮಸ್ಥೈರ್ಯ ತುಂಬುವಂತಹ ಕೆಲಸ ಮಾಡಲಾಗುತ್ತಿದೆ. ಶಿಕ್ಷಕರು, ಮುಖ್ಯ ಶಿಕ್ಷಕರು, ವಾಟ್ಸ್ಆ್ಯಪ್ ಮತ್ತು ವಚರ್ುಯಲ್ ಮೀಡಿಯಾಗಳ ಮೂಲಕ ಈ ಪತ್ರ ತಲುಪಿಸಲಾಗುತ್ತಿದೆ.-ಆರ್.ರಾಮಾರಾಧ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ದಕ್ಷಿಣ ವಲಯ, ಮೈಸೂರು