ಕೊರೊನಾ ಕಾಟ: ಏಷ್ಯಾ ಕಪ್ ಟಿ20 ಕ್ರಿಕೆಟ್ ಪಂದ್ಯಾವಳಿ ರದ್ದು ಬೆಂಗಳೂರು, ಮೇ 20, 2021 (..):ಏಷ್ಯಾಕಪ್‌ ಟಿ20 ಕ್ರಿಕೆಟ್‌ ಪಂದ್ಯಾವಳಿವನ್ನುರದ್ದುಗೊಳಿಸಲುನಿರ್ಧರಿಸಲಾಗಿದೆ. ಹೌದು. ಕೊರೋನಾ 2ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ. ಕಳೆದ ವರ್ಷ ಈ ಪಂದ್ಯಾವಳಿ ಪಾಕಿಸ್ಥಾನದ ಆತಿಥ್ಯದಲ್ಲಿ ನಡೆಯಬೇಕಿತ್ತು. ಆಗಲೂ ಕೋವಿಡ್ ಕಾರಣದಿಂದ ರದ್ದು ಮಾಡಿ ಬಳಿಕ ಶ್ರೀಲಂಕಾಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಪ್ರತಿಷ್ಠಿತ ಪಂದ್ಯಾವಳಿ ರದ್ದು ಮಾಡಿ ಆದೇಶ ಪ್ರಕಟವಾಗಿದೆ.