‘ಆರ್ ಆರ್ ಆರ್’ ಚಿತ್ರದ ಜೂನಿಯರ್ ಎನ್ ಟಿ ಆರ್ ಪೋಸ್ಟರ್ ರಿಲೀಸ್ ಬೆಂಗಳೂರು, ಮೇ 20, 2021 (..): ಜ್ಯೂನಿಯರ್ ಎನ್ ಟಿ ಆರ್ ಹುಟ್ಟುಹಬ್ಬದ ಅಂಗವಾಗಿ ‘ಆರ್ ಆರ್ ಆರ್’ ಚಿತ್ರತಂಡ ಜ್ಯೂ.ಎನ್ ಟಿ ಆರ್ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದೆ. ಅಂದಹಾಗೆ ಜ್ಯೂನಿಯರ್ ಎನ್ ಟಿ ಆರ್ ಈ ಸಿನಿಮಾದಲ್ಲಿ ಕೊಮರಾಮ್ ಭೀಮ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಸುಮಾರು 400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ರಾಮ್ ಚರಣ್, ಅಲಿಯಾ ಭಟ್, ಒಲಿವಿಯಾ ಮೋರಿಸ್, ಅಜಯ್ ದೇವಗನ್, ಸೇರಿದಂತೆ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.