ಬೆಂಗಳೂರಿನ ನಾಗವಾರದಲ್ಲಿ ಆಸರೆ ಯೋಜನೆ ಆರಂಭಿಸಿದ ಶಿವಣ್ಣ-ಗೀತಾ ದಂಪತಿ ಬೆಂಗಳೂರು, ಮೇ 19, 2021 (..):ನಾಗವಾರದ ಸುಮಾರು 500 ಮಂದಿಗೆ ನಿತ್ಯ ಊಟ, ಉಪಹಾರ ಒದಗಿಸುತ್ತಿದ್ದಾರೆ ಹ್ಯಾಟ್ರಿಕ್ ಹೀರೋ ಶಿವಣ್ಣ ದಂಪತಿ. ಹೌದು. ಲಾಕ್ ಡೌನ್ ನಿಂದಾಗಿ ದುಡಿಮೆಯಿಲ್ಲದೇ ಸಂಕಷ್ಟದಲ್ಲಿರುವವರ ನೆರವಿಗೆ ನಟ ಶಿವರಾಜ್ ಕುಮಾರ್ ದಂಪತಿ ಬಂದಿದ್ದಾರೆ. ಗೀತಾ ಹಾಗೂ ಶಿವಣ್ಣ ಆಸರೆ ಯೋಜನೆ ಮೂಲಕ ನಾಗವಾರದ ಸುಮಾರು 500 ಮಂದಿಗೆ ನಿತ್ಯ ಊಟ, ಉಪಹಾರ ಒದಗಿಸುತ್ತಿದ್ದಾರೆ, ಇದು ಲಾಕ್ ಡೌನ್ ಮುಗಿಯುವವರೆಗೂ ಮುಂದುವರಿಯಲಿದೆ ಎನ್ನಲಾಗಿದೆ. ಆಹಾರ ಸರಬರಾಜಿಗಾಗಿ ಶಿವಣ್ಣ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಶಿವಣ್ಣ ಆಪ್ತ, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನೇತೃತ್ವ ವಹಿಸಿದ್ದಾರೆ.