ಪತ್ರಕರ್ತರ ನೆರವಿಗೆ ಬಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು: ಈ ನಂಬರ್ ಗೆ ಕರೆ ಮಾಡಿದ್ರೆ ಸಿಗುತ್ತೆ ಆ್ಯಂಬುಲೆನ್ಸ್ ಸೇವೆ… ಬೆಂಗಳೂರು,ಮೇ,19,2021(..):ಕಳೆದ ಬಾರಿ ಕೊರೋನ ಆರಂಭವಾಗಿ ಲಾಕ್ ಡೌನ್ ಆದಾಗ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ತನ್ನ ಸದಸ್ಯರಿಗೆ ಆಹಾರದ ಕಿಟ್ ಗಳನ್ನು ನೀಡಿ ಸಹಾಯ ಹಸ್ತ ಚಾಚಿತ್ತು. ಇದೀಗ ಮತ್ತೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಪತ್ರಕರ್ತರ ನೆರವಿಗೆ ಬಂದಿದ್ದು, ’ ಆಂಬ್ಯುಲೆನ್ಸ್ ಎಂಬ ಸಂಸ್ಥೆ ಜೊತೆ ಒಡಂಬಡಿಕೆ ಮಾಡಿಕೊಂಡು ಆ್ಯಂಬುಲೆನ್ಸ್ ಸೇವೆ ಒದಗಿಸಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷರಾದ ಸದಾಶಿವ್ ಶೆಣೈ, ಕಳೆದ ಬಾರಿ ಕೊರೋನ ಆರಂಭವಾಗಿ ಲಾಕ್ ಡೌನ್ ಆದಾಗ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ತನ್ನ ಸದಸ್ಯರಿಗೆ ಆಹಾರದ ಕಿಟ್ ಗಳನ್ನು ನೀಡಿ ಸಹಾಯ ಹಸ್ತ ಚಾಚಿತ್ತು. ಈ ಬಾರಿ ಕೊರೋನ ವಿಕೋಪಕ್ಕೆ ಹೋದಾಗ ಸರಕಾರದ ಸಹಾಯದಿಂದ ವಾಕ್ಸಿನೇಷನ್ ಕೂಡ ಮಾಡಿಸಿದ್ದೇವೆ. ಇದರ ಮಧ್ಯೆಯೂ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಸದಸ್ಯರು ಕಡು ಕಷ್ಟದ ಈ ಕಾಲದಲ್ಲಿ ವೈದ್ಯಕೀಯ ಸವಲತ್ತು ಅದರಲ್ಲೂ ಆಂಬ್ಯುಲೆನ್ಸ್ ಸಿಗದೆ ಪರದಾಡುವುದನ್ನು ನೋಡಿ ನಮ್ಮ ಮನಸ್ಸೂ ಮರುಗಿದೆ. ಹೀಗಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹೊಸ ಯೋಜನೆಯ ಮುಖಾಂತರ ತನ್ನ ಸದಸ್ಯರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗೆ ಪುಟ್ಟ ಹೆಜ್ಜೆ ಇಟ್ಟಿದೆ. ’ ಆಂಬ್ಯುಲೆನ್ಸ್ ಎಂಬ ಸಂಸ್ಥೆ ಜೊತೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಒಡಂಬಡಿಕೆ ಮಾಡಿ ಕೊಂಡಿದೆ. ನಮ್ಮ ಸದಸ್ಯರ ಅಥವಾ ಅವರ ಕುಟುಂಬದ ಮಂದಿಯ ಆರೋಗ್ಯದಲ್ಲಿ ಏರುಪೇರಾದರೆ ಕೆಳಗೆ ನೀಡಿದ ಈ ನಂಬರ್ ಗಳಿಗೆ ಕರೆ ಮಾಡಿದರೆ 15 ರಿಂದ 20 ನಿಮಿಷದೊಳಗೆ ಆಂಬುಲೆನ್ಸ್ ನಿಮ್ಮ ಸೇವೆಗೆ ಸದಾ ಸಿದ್ಧವಿರುತ್ತದೆ. ದುಬಾರಿ ದರದ ಬದಲು ಮಾಮೂಲಿ ದರದಲ್ಲೇ ಈ ಸೇವೆ ನಮ್ಮ ಸದಸ್ಯರಿಗೆ ಲಭ್ಯವಾಗಲಿದೆ. ಅಂದಹಾಗೆ ಸದಸ್ಯರ ರೆಫರೆನ್ಸ್ ಮೂಲಕ ಪ್ರೆಸ್ ಕ್ಲಬ್ ಸದಸ್ಯರಲ್ಲದ ಪತ್ರಕರ್ತರು ಕೂಡ ಕಷ್ಟದ ಈ ಸಮಯದಲ್ಲಿ ಇದನ್ನು ಬಳಸಬಹುದು. ಅಗತ್ಯವಿದ್ದವರು ನಮ್ಮ ಪ್ರೆಸ್ ಕ್ಲಬ್ ನ ಮ್ಯಾನೇಜರ್ ಲಕ್ಷ್ಮಣ್ 9449114752 ಅಥವಾ ಆ್ಯಂಬುಲೆನ್ಸ್ ಸರ್ಮಿಸ್ ನ‌ ಮುಖ್ಯಸ್ಥರನ್ನು 7019119989, 9731110931 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಹಾಗೆಯೇ ನಮ್ಮ ಶ್ರಮ ವ್ಯರ್ಥ ಆದರೂ ಪರವಾಗಿಲ್ಲ, ಈ ಒಂದು ವ್ಯವಸ್ಥೆಯನ್ನು ಉಪಯೋಗಿಸುವ ಸನ್ನಿವೇಶ ನಿಮ್ಮ ಪಾಲಿಗೆ ಬಾರೆದೆ ಇರಲಿ ಎಂಬುದೇ ನಮ್ಮ ಆಶಯ ಮತ್ತು ಪ್ರಾರ್ಥನೆ. ಆದರೂ ಕೂಡ ಮುಂಜಾಗರೂಕತೆಗಾಗಿ ಈ ವಿಶೇಷ ವ್ಯವಸ್ಥೆಯನ್ನು ಮಾಡಿದ್ದೇವೆ. ಇದು ನಿಮಗೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇದರ ಕೊಡುಗೆ. ಜಾಗರೂಕತೆಯಿಂದ ಇರಿ… ಮಾಸ್ಕ್ ಧರಿಸಿ… ಸಾಮಾಜಿಕ ಅಂತರ ಪಾಲಿಸಿ ಎಂದು ಸದಾಶಿವ್ ಶೆಣೈ ಮಾಹಿತಿ ನೀಡಿದ್ದಾರೆ. : - - – .