ಡಿಆರ್ ಡಿಒ ಅಭಿವೃದ್ಧಿ ಪಡಿಸಿರುವ 2- ಔಷಧಿ ಬಿಡುಗಡೆ… ನವದೆಹಲಿ,ಮೇ,17,2021(..):ಡಿ ಆರ್ ಡಿ ಓ ಅಭಿವೃದ್ಧಿ ಪಡಿಸಿರುವ 2-ಡಿಜಿ ಕೊರೋನಾ ಔಷಧಿಯನ್ನ ಇಂದು ಬಿಡುಗಡೆ ಮಾಡಲಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ 2-ಡಿಜಿ ಔಷಧಿಯನ್ನು ಇಂದು ಸೋಂಕಿತರ ತುರ್ತು ಚಿಕಿತ್ಸೆಗಾಗಿ ಬಳಕೆ ಮಾಡಲು ಬಿಡುಗಡೆ ಮಾಡಿದ್ದಾರೆ. ಮೊದಲ ಹಂತದ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧಿಯ 10,000 ಡೋಸ್‌ಗಳನ್ನು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು 2-ಡಿಜಿ ಔಷಧಿಯನ್ನು ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರಿಗೆ ಹಸ್ತಾಂತರಿಸಿದರು. : 2- –- –