ಕ್ವಾರಂಟೈನ್‌ ಗೆ ಪ್ರಧಾನಿ ಮೋದಿ ಮಾದರಿ- ಶಾಸಕ ಹೆಚ್.ಪಿ ಮಂಜುನಾಥ್ ಲೇವಡಿ… ಮೈಸೂರು,ಮೇ,15,2021(..):ಕ್ವಾರಂಟೈನ್‌ ಗೆ ಪ್ರಧಾನಿ ನರೇಂದ್ರ ಮೋದಿಯವರೇ ಮಾದರಿ ಎಂದು ಹುಣಸೂರು ಕಾಂಗ್ರೆಸ್ ಶಾಸಕ ಹೆಚ್.ಪಿ ಮಂಜುನಾಥ್ ಲೇವಡಿ ಮಾಡಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಹೆಚ್.ಪಿ ಮಂಜುನಾಥ್, ಬಿಜೆಪಿಯವರು ಪ್ರಧಾನಿಯವರೇ ಮಾದರಿ ಅಂತ ಬೊಬ್ಬೆ ಹೊಡೆಯುತ್ತಾರೆ. ಈ ನಡುವೆ ಕಳೆದ ಏಳು ವರ್ಷದಿಂದ ಮೋದಿ ಜನರಿಂದ ದೂರವಾಗಿ ಕ್ವಾರಂಟೈನ್‌ ನಲ್ಲೇ ಇದ್ದಾರೆ. ಹೀಗಾಗಿ ಮೋದಿ ನಿಲುವನ್ನೇ ಅನುಸರಿಸಿ ಮನೆಯಲ್ಲೇ ಇದ್ದು ಆರೋಗ್ಯ ಉಳಿಸಿಕೊಳ್ಳಿ‌ ಎಂದು ವ್ಯಂಗ್ಯವಾಡಿದರು. ಟಾಸ್ಕ್ ಫೋರ್ಸ್ ಕಮಿಟಿ ದಸರಾ ಸಮಿತಿ ಆಗಬಾರದು… ಟಾಸ್ಕ್ ಫೋರ್ಸ್ ಕಮಿಟಿ ಬಗ್ಗೆ ಮಾತನಾಡಿದ ಶಾಸಕ ಹೆಚ್.ಪಿ ಮಂಜುನಾಥ್, ಟಾಸ್ಕ್ ಫೋರ್ಸ್ ಕಮಿಟಿ ದಸರಾ ಸಮಿತಿ ಆಗಬಾರದು. ಉಪ ಸಮಿತಿಗಳೇ ಬೇರೆ, ಸ್ವಾಗತ ಸಮಿತಿಯೇ ಬೇರೆ. ಇಂತಹ ಯುದ್ದದ ಸಮಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕು. ಪ್ರತಿ ಪಕ್ಷಗಳು ಜಿಲ್ಲಾಡಳಿತದ ಕೈಜೋಡಿಸಲು ಸಿದ್ದವಾಗಿವೆ. ಹೀಗಾಗಿ ಟಾಸ್ಕ್ ಫೋರ್ಸ್ ಕಮಿಟಿ ರಚನೆಯಲ್ಲಿ ರಾಜಕೀಯ ಬೇಡ. ಎಲ್ಲ ಶಾಸಕರನ್ನ ಒಟ್ಟುಗೂಡಿಸಿ ಕೆಲಸ ಮಾಡಿ ಎಂದು ಸಲಹೆ ನೀಡಿದರು. ನನ್ನ ಕ್ಷೇತ್ರದಲ್ಲಿ ಆರೋಗ್ಯ ರಕ್ಷಾ ಹಣದಿಂದ ಆಕ್ಸಿಜನ್‌ ಖರೀದಿ ಮಾಡುತ್ತಿದ್ಧೇವೆ. ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳ ಸಮಸ್ಯೆ ಇದೆ. ಸರ್ಕಾರದ ನಿಲುವು ಮನೆಗೆ ಬೆಂಕಿ ಹಚ್ಚಿದ ಮೇಲೆ ಬಾವಿ ತೋಡಿದಂತಾಗಬಾರದು. ಸುಳ್ಳು ಹೇಳಿಕೆಗಳನ್ನ ನೀಡಿ‌ ಮಾಧ್ಯಮಗಳನ್ನ ದುರ್ಬಳಕೆ ಮಾಡಿಕೊಳ್ಳಬೇಡಿ. ನ್ಯೂನ್ಯತೆ ಮುಚ್ಚಿ ಹಾಕಲು ವಿಚಾರ ಡೈವರ್ಟ್ ಮಾಡಲು ಹೊರಟಿದ್ದೀರಾ ಎಂದು ಹೆಚ್.ಪಿ ಮಂಜುನಾಥ್ ಹೇಳಿದರು. : ’- – - - -