ಮೇ.24ರ ಬಳಿಕವೂ ಲಾಕ್ ಡೌನ್ ಅಗತ್ಯವಿದ್ರೆ ನಿರ್ದಾಕ್ಷಿಣ್ಯವಾಗಿ ಜಾರಿ ಮಾಡಲಿ- ಕೇಂದ್ರ ಸಚಿವ ಡಿ.ವಿ ಸದಾನಂದಗೌಡ… ಬೆಂಗಳೂರು,ಮೇ,15,2021(..):ಮೇ 24ರ ಬಳಿಕವೂ ರಾಜ್ಯದಲ್ಲಿ ಲಾಕ್ ಡೌನ್ ಅಗತ್ಯವಿದ್ರೆ ನಿರ್ದಾಕ್ಷಿಣ್ಯವಾಗಿ ಜಾರಿ ಮಾಡಲಿ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಬೆಂಗಳೂರಿನಲ್ಲಿ ನಾಲ್ಕುದಿನಗಳಿಂದ ಕೊರೊನಾ ಸೋಂಕು ಇಳಿಕೆಯಾಗಿದೆ. ಇದಕ್ಕೆ ಲಾಕ್ ಡೌನ್ ಕಾರಣ. ಮಹಾರಾಷ್ಟ್ರದಲ್ಲಿ ಕೊರೋನಾ ಚೈನ್ ಗೆ ಬ್ರೇಕ್ ಹಾಕಿದ್ದು ಲಾಕ್ ಡೌನ್. ಹೀಗಾಗಿ ಮೇ.24ರ ಬಳಿಕವೂ ಲಾಕ್ ಡೌನ್ ವಿಸ್ತರಣೆ ಅಗತ್ಯವಿದ್ದರೇ ಜಾರಿ ಮಾಡಲಿ ಎಂದರು. ಇನ್ನು ತಮ್ಮ ವಿರುದ್ಧ ವಿಪಕ್ಷಗಳ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಕೆಲಸ ಇಲ್ಲದವರ ಬಗ್ಗೆ ನಾನ್ಯಾಕೆ ಮಾತನಾಡಲಿ. ನನಗೆ ಮಾಡಲು ಕೆಲಸ ಇದೆ ಎಂದು ಲೇವಡಿ ಮಾಡಿದರು. ; – - - 24 – - …