ಬೀದಿನಾಯಿಗಳ ದಾಳಿಗೆ ವೃದ್ಧೆ ಬಲಿ… ಬೆಂಗಳೂರು,ಮೇ,,15,2021(..):ಹಸಿದ ಬೀದಿನಾಯಿಗಳ ದಾಳಿಗೆ ವೃದ್ಧೆ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಶಿಧರ್ ಲೇಔಟ್​​ನ ದ್ವಾರಕನಗರದಲ್ಲಿ ಈ ಘಟನೆ ನಡೆದಿದೆ. ದ್ವಾರಕನಗರದ ರಸ್ತೆ ಬದಿಯಲ್ಲಿ ಮಲಗಿದ್ದ ವೃದ್ಧೆ ಮೇಲೆ ರಾತ್ರಿ ಏಳೆಂಟು ಬೀದಿ ನಾಯಿಗಳು ದಾಳಿ ಮಾಡಿದ್ದವು. ಕೂಡಲೇ ಅಲ್ಲಿದ್ದ ಸಾರ್ವಜನಿಕರು ನಾಯಿಗಳನ್ನು ಓಡಿಸಿ ವೃದ್ಧೆಯನ್ನು ರಕ್ಷಿಸಿದ್ದಾರೆ. ಆದರೆ ಹೊಂಚು ಹಾಕಿ ಕುಳಿತ ಬೀದಿ ನಾಯಿಗಳು ತಡರಾತ್ರಿ ಮತ್ತೆ ವೃದ್ಧೆ ಮೇಲೆ ಹಲ್ಲೆ ಮಾಡಿ ಆಕೆಯನ್ನು ಏಳೆದೋಯ್ದು, ಕಚ್ಚಿ ಸಾಯಿಸಿವೆ. ವೃದ್ಧೆ ಮುಖ ಹಾಗೂ ಕಾಲು ಭಾಗಗಳನ್ನು ನಾಯಿಗಳು ಸಂಪೂರ್ಣ ಕಚ್ಚಿ ತಿಂದು ಹಾಕಿದೆ ಎನ್ನಲಾಗಿದೆ. : --- -