ರಕ್ತದಾನ ಮಾಡಿ ಜಾಗೃತಿ ಮೂಡಿಸುತ್ತಿರುವ ರಾಗಿಣಿ ಬೆಂಗಳೂರು, ಮೇ 15, 2021 (..):ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ ನಟಿ ರಾಗಿಣಿ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಲು ರಕ್ತದಾನ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಂದಹಾಗೆ ಕೋವಿಡ್ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಆಹಾರ ಪೊಟ್ಟಣ್ಣ ನೀಡುವ ಮೂಲಕ ರಾಗಿಣಿ ದ್ವಿವೇದಿ ನೆರವಾಗುತ್ತಿದ್ದಾರೆ. ಇದೀಗ ರಕ್ತದಾನದ ಮಹತ್ವದ ಕುರಿತು ತಿಳಿಹೇಳುತ್ತಿದ್ದಾರೆ. ಒಮ್ಮೆ ಯಾವುದೇ ಲಸಿಕೆ ಹಾಕಿಸಿಕೊಂಡರೆ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಹೀಗಾಗಿ ಲಸಿಕೆಗೂ ಮುನ್ನ ರಕ್ತದಾನ ಮಾಡುವಂತೆ ಕೋರಿದ್ದಾರೆ.