ಬೈ ಎಲೆಕ್ಷನ್ ಕರ್ತವ್ಯದ ವೇಳೆ ಕೊರೋನಾಗೆ ಶಿಕ್ಷಕರು ಬಲಿ: ಇದಕ್ಕೆ ಆಡಳಿತ ನಡೆಸುವವರೇ ಹೊಣೆ ಎಂದ ಡಿ.ಕೆ ಶಿವಕುಮಾರ್… ಬೆಂಗಳೂರು,ಮೇ,15,2021(..):ಬೈ ಎಲೆಕ್ಷನ್ ಕರ್ತವ್ಯದ ವೇಳೆ ಕೊರೋನಾಗೆ ಶಿಕ್ಷಕರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೆ ಆಡಳಿತ ನಡೆಸುವವರೇ ಹೊಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇದು ನಮ್ಮ ಸ್ವಯಂಕೃತ ಅಪರಾಧ. ಆಡಳಿತ ನಡೆಸುವವರೇ ಇದಕ್ಕೆ ಹೊಣೆ. ಉಪಚುನಾವಣೆ ವೇಳೆ ಎಲ್ಲರೂ ಜಾಗೃತಿ ವಹಿಸಬೇಕಿತ್ತು. ಯಾವ ಪಕ್ಷದವರೂ ಸರಿಯಾಗಿ ಅಂತರ ಕಾಪಾಡಲಿಲ್ಲ. ನಾನು ಪ್ರಯತ್ನಿಸಿದೆ. ಆದರೆ ಜನರ ಜಂಜಾಟ ಹೆಚ್ಚಾಗಿತ್ತು. ಸರ್ಕಾರ ಚುನಾವಣೆ ಬೇಡ ಎಂದಿದ್ದರೇ ಚುನಾವಣಾ ಆಯೋಗ ಏನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗಲಾದ್ರೂ ಎಚ್ಚೆತ್ತುಕೊಳ್ಳಬೇಕು ಎಂದರು. ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಸಂಖ್ಯೆ ಕಡಿಮೆ ಮಾಡುತ್ತಿದ್ದಾರೆ. ಲಾಕ್ ಡೌನ್ ವಿಚಾರದಲ್ಲಿ ನಾವು ಮೂಗು ತೂರಿಸುವುದಿಲ್ಲ. ಲಾಕ್ ಡೌನ್ ವಿಚಾರವನ್ನ ಸರ್ಕಾರಕ್ಕೆ ಬಿಡ್ತೇವೆ. ಆಗಂತ ಮಾಡಿದ ತಪ್ಪು ತಿದ್ಧಿಕೊಳ್ಳದಿದ್ದರೇ ಸುಮ್ನೆ ಇರುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು. … : . , 15, 2021 (..): .. - . .. - . “ . . . . , . ’ . ,” .“ ’ , . ’ ’ ,” .: / .. / ./ / / : –- --- – –