ರಾಜ್ಯದಲ್ಲಿ ಲಾಕ್​ ಡೌನ್ ಮುಂದುವರಿಯುವ ಅವಶ್ಯಕತೆ ಇದೆ- ಸಚಿವ ಆರ್.ಅಶೋಕ್… ಬೆಂಗಳೂರು,ಮೇ,14,2021(..):ರಾಜ್ಯದಲ್ಲಿ ಕೊರೋನಾ 2ನೇ ಅಲೆ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮೇ 24ರವರೆಗೆ ಲಾಕ್​ ಡೌನ್​ ಜಾರಿಗೊಳಿಸಿದೆ. ಲಾಕ್​ಡೌನ್​ ಬಳಿಕ ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಇಳಿಮುಖವಾಗಿದ್ದು, ಈ ಮಧ್ಯೆ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಯುವ ಅವಶ್ಯಕತೆ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ನಾನು ಕೂಡ ಒಬ್ಬ ಬೆಂಗಳೂರಿನ ನಾಗರಿಕನಾಗಿ ಲಾಕ್​ಡೌನ್​ ಮುಂದುವರಿಯಲಿ ಎಂದೇ ಬಯಸುತ್ತೇನೆ. ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯದಲ್ಲಿ ಲಾಕ್ ​ಡೌನ್ ಮುಂದುವರಿಯುವ ಅವಶ್ಯಕತೆ ಇದೆ. ಹೀಗಾಗಿ ನಾನು ಸಿಎಂಗೆ ಲಾಕ್ ​​ಡೌನ್ ಮುಂದುವರಿಸುವ ಬಗ್ಗೆಯೇ ಸಲಹೆಯನ್ನ ನೀಡುವೆ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ 47 ದಿನಗಳ ಕಾಲ ಲಾಕ್​ಡೌನ್​ ಮಾಡಲಾಗಿತ್ತು. ದೆಹಲಿಯಲ್ಲಿ ಈಗಲೂ ಸಹ ಲಾಕ್​ ಡೌನ್​ ಆದೇಶ ಜಾರಿಯಲ್ಲಿದೆ. ರಾಜ್ಯದಲ್ಲೂ ಸೆಮಿ ಲಾಕ್​ಡೌನ್​ ಹಾಗೂ ಲಾಕ್​ಡೌನ್​ ಆದೇಶದ ಬಳಿಕ ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಲಾಕ್​ಡೌನ್​ ಆದೇಶವನ್ನ ಮೊದಲು ವಿಪಕ್ಷಗಳು ಗೇಲಿ ಮಾಡಿದ್ದವು. ಆದರೆ ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಇಳಿಮುಖವಾಗುವಲ್ಲಿ ಲಾಕ್ ​ಡೌನ್​ ಪ್ರಮುಖ ಪಾತ್ರ ವಹಿಸಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು. : – – – -- . .