ಬಿಜೆಪಿಯೊಂದು ಸುಳ್ಳಿನ ಕಾರ್ಖಾನೆ ಎಂದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಡಿಸಿಎಂ ಗೋವಿಂದ ಕಾರಜೋಳ ಟಾಂಗ್… ಬಾಗಲಕೋಟೆ,ಮೇ,14,2021(..):ಬಿಜೆಪಿಯೊಂದು ಸುಳ್ಳಿನ ಕಾರ್ಖಾನೆ ಎಂಧು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಸಾವಿನ ಮನೆಯಲ್ಲಿ ಸಿದ್ಧರಾಮಯ್ಯ ರಾಜಕೀಯ ಮಾಡುತ್ತಾರೆ. ಅವರು ಒಳ್ಳೆಯ ಸಲಹೆ ಕೊಡಲಿ. ಸರ್ಕಾರದ ಜತೆ ಕೈಜೋಡಿಸಲಿ. ಆದರೇ ರಾಜಕಾರಣ ಮಾಡುವುದು ಬೇಡ. ಇದು ಸರಿಯಲ್ಲ ಎಂದು ಕಿಡಿಕಾರಿದರು. ಕೊರೋನಾ ಲಸಿಕೆ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ, ಈಗಾಗಲೇ 3 ಕೋಟಿ ಡೋಸ್ ಗೆ ಆರ್ಡರ್ ಕೊಟ್ಟಿದ್ದೇವೆ. 2ನೇ ಡೋಸ್ ಗೆ ಹೆಚ್ಚಿನ ಆದ್ಯತೆ ನೀಡುವಂತೆ ಹೇಳಿದ್ದೇವೆ ಎಂದು ತಿಳಿಸಿದರು. : - - -- - - ’ -