ಸಿಎಂ ಕರೋನಾ ನಿಧಿಗೆ 5 ಕೋಟಿ ರೂ. ನೀಡಿದ ಅಪೆಕ್ಸ್ ಬ್ಯಾಂಕ್.. ಬೆಂಗಳೂರು,ಮೇ,,12,2021(..):ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆಯನ್ನು ಅಪೆಕ್ಸ್ ಬ್ಯಾಂಕ್ ನೀಡಿದ್ದು, ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ಎಂದು ಮುಖ್ಯಮಂತ್ರಿಗಳಿಗೆ ಚೆಕ್ಕನ್ನು ಹಸ್ತಾಂತರಿಸಿದರು. ಇದೇ ವೇಳೆ 1 ಲಕ್ಷ -95 ಮಾಸ್ಕ್ ಅನ್ನು ಸಹ ಮುಖ್ಯಮಂತ್ರಿಗಳಿಗೆ ಅಪೆಕ್ಸ್ ಬ್ಯಾಂಕ್ ವತಿಯಿಂದ ನೀಡಲಾಯಿತು. ಇದೇ ವೇಳೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕರಾದ ಬೆಳ್ಳಿಪ್ರಕಾಶ್ ಅವರು, ಮಾರ್ಕೆಟಿಂಗ್ ಫೆಡರೇಶನ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಅವರು, ಅಪೆಕ್ಸ್ ಬ್ಯಾಂಕ್ ಎಂಡಿ ಸಿ.ಎನ್.ದೇವರಾಜ್ ಅವರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸರ್ಕಾರಕ್ಕೆ ಬೇಕಿದೆ ಇಂತಹ ನೆರವಿನ ಹಸ್ತ ಈ ವೇಳೆ ಮಾತನಾಡಿದ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಕೋವಿಡ್ ಎರಡನೆಯ ಬಹಳ ಗಂಭೀರವಾಗಿ ಪರಿಣಾಮವನ್ನು ಬೀರುತ್ತದೆ. ಇದರ ನಿರ್ವಹಣೆ ಸರ್ಕಾರಗಳಿಗೂ ಒಂದು ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳು ಸರ್ಕಾರದ ನೆರವಿಗೆ ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಪೆಕ್ಸ್ ಬ್ಯಾಂಕ್ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದಂತೆ ಇತರ ಸಂಘ ಸಂಸ್ಥೆಗಳು, ಖಾಸಗಿ ಕಂಪನಿಗಳು ಮುಂದಾಗಬೇಕಿದೆ. ಆ ಮೂಲಕ ಸಾರ್ವಜನಿಕ ಹಿತಾಸಕ್ತಿಗೆ ಇಂತಹ ಹಣ ಬಳಕೆಯಾಗಲು ಕಾರಣವಾಗಬೇಕಿದೆ. ನಾನು ಸಹ ಮೈಸೂರು ಮೃಗಾಲಯ ನಿರ್ವಹಣೆಗೆ ದಾನಿಗಳು ನೆರವು ನೀಡಬೇಕೆಂದು ನಿನ್ನೆಯಷ್ಟೇ ಮೈಸೂರಿನಲ್ಲಿ ಮನವಿ ಮಾಡಿದ್ದೆ. ಹೀಗೆ ಉದಾರಿಗಳ ನೆರವಿನಿಂದ ಇಂತಹ ಮಹಾಮಾರಿ ಎದುರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. : 5 - - - .