ಇಂದು ಲಸಿಕೆ ಬರದಿದ್ರೆ ನಾಳೆ ಬೆಂಗಳೂರಿನಲ್ಲಿ ಲಸಿಕೆ ಸಿಗಲ್ಲ- ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ… ಬೆಂಗಳೂರು,ಮೇ,12,2021(..):ನಮ್ಮ ಬಳಿ 40 ಸಾವಿರ ಡೋಸ್ ಅಷ್ಟೆ ಲಸಿಕೆ ಇದೆ. ಇಂದು ಸಂಜೆ ಲಸಿಕೆ ಬರದಿದ್ದರೇ ನಾಳೆ ಬೆಂಗಳೂರಿನಲ್ಲಿ ಕೊರೋನಾ ಲಸಿಕೆ ಸಿಗಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು. ಲಸಿಕೆ ನೀಡಿಕೆ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಮ್ಮ ಬಳಿ ಇರುವ 40 ಸಾವಿರ ಡೋಸ್ ಇವತ್ತಿಗಷ್ಟೇ ಆಗುತ್ತದೆ. ಕೊರೊನಾ ಲಸಿಕೆ ಸ್ಟಾಕ್ ಮಾಡಲು ಸ್ಥಳವಿದೆ. ಆದರೆ ಕೊರೋನಾ ಲಸಿಕೆ ಸರಬರಾಜು ಕಡಿಮೆಯಾಗಿದೆ. ಸಂಜೆ ಬೆಂಗಳೂರಿಗೆ ಲಸಿಕೆ ಬರಬೇಕು. ಬರದಿದ್ದರೇ ನಾಳೆ ಬೆಂಗಳೂರಿನಲ್ಲಿ ಲಸಿಕೆ ಇರುವುದಿಲ್ಲ ಎಂದು ಗೌರವ್ ಗುಪ್ತ ತಿಳಿಸಿದ್ದಾರೆ. : – - – - .