3ಕೋಟಿ ಡೋಸ್ ಲಸಿಕೆಗೆ ಬೇಡಿಕೆ ಇಟ್ಟಿದ್ದೇವೆ: ಈಗ ಹೊಸದಾಗಿ ಯಾರಿಗೂ ವ್ಯಾಕ್ಸಿನ್ ಹಾಕುತ್ತಿಲ್ಲ- ಸಿಎಸ್ ರವಿಕುಮಾರ್.. ಬೆಂಗಳೂರು,ಮೇ,12,2021(..):ರಾಜ್ಯಕ್ಕೆ 6 ಕೋಟಿ ಡೋಸ್ ಲಸಿಕೆ ಬೇಕು. ಈಗಾಗಿ ಸದ್ಯಕ್ಕೆ 3 ಕೋಟಿ ಡೋಸ್ ಲಸಿಕೆಗೆ ಕೇಂದ್ರದ ಬಳಿ ಬೇಡಿಕೆ ಇಟ್ಟಿದ್ದೇವೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ತಿಳಿಸಿದರು. ಮಾಧ್ಯಮಗಳ ಜತೆ ಮಾತನಾಡಿ ಮಾಹಿತಿ ನೀಡಿದ ಸಿಎಸ್ ರವಿ ಕುಮಾರ್, ನಮ್ಮಲ್ಲಿ ಲಸಿಕೆ ಇದ್ದಿದ್ದರೇ ಹಾಕುತ್ತಿದ್ದವು. ಏಪ್ರಿಲ್ 2ನೇ ವಾರದಲ್ಲಿ ಲಸಿಕೆಗೆ ಆರ್ಡರ್ ಮಾಡಿದ್ದವು. ಮೇ 1ರಿಂದ ನಮಗೆ ಲಸಿಕೆ ಪೂರೈಕೆ ಮಾಡಿದ್ದಾರೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪೂರೈಕೆ ಮಾಡುತ್ತಿದ್ದಾರೆ. ಪ್ರತಿ 15 ದಿನಕ್ಕೆ 15 ಲಕ್ಷ ಡೋಸ್ ಲಸಿಕೆ ಪೂರೈಸುತ್ತಿದ್ದಾರೆ. ಈಗ ಹೊಸದಾಗಿ ಯಾರಿಗೂ ಲಸಿಕೆ ಹಾಕುತ್ತಿಲ್ಲ. 2ನೇ ಡೋಸ್ ಮಾತ್ರ ಕೊಡ್ತಿದ್ದೇವೆ. ಕರ್ನಾಟಕದಲ್ಲಿ ಮಾತ್ರ ಇಂತಹ ಸಮಸ್ಯೆ ಇಲ್ಲ. ಎಲ್ಲಾ ರಾಜ್ಯಗಳಲ್ಲೂ ಇಂತಹ ಸಮಸ್ಯೆ ಇದೆ ಎಂದು ತಿಳಿಸಿದರು. ರಾಜ್ಯಕ್ಕೆ 6 ಕೋಟಿ ಡೋಸ್ ಲಸಿಕೆ ಅಗತ್ಯವಿದ್ದು ಸದ್ಯ 3 ಕೋಟಿ ಡೋಸ್ ಗೆ ಬೇಡಿಕೆ ಇಟ್ಟಿದ್ದೇವೆ. ಲಸಿಕೆ ನೀಡಲು ನಮಗೆ ಸಮಯ ಬೇಕಿದೆ. ಬೇರೆ ದೇಶದಲ್ಲಿ ಉತ್ಪಾದಿಸುವ ಲಸಿಕೆ ಆಮದಿಗೂ ಮನವಿ ಮಾಡಿದ್ದೇವೆ. ನಮಗೆ ಲಸಿಕೆ ಬಂದಂತೆ ಜನರಿಗೆ ಕೊಡುತ್ತೇವೆ ಎಂದು ಸಿಎಸ್ ರವಿ ಕುಮಾರ್ ತಿಳಿಸಿದರು. …. “ 3 ; : , 12, 2021 (..): “ 6 . ,” , . 2nd . “ 1 45 . 15 . , . , 2nd . , ,” .: / / ./ 3 / : - 3 –-- .