ಶ್ರೀಲಂಕಾ ವಿರುದ್ಧ ಸರಣಿ: ಟೀಂ ಇಂಡಿಯಾ ನಾಯಕತ್ವಕ್ಕೆ ಭಾರಿ ಪೈಪೋಟಿ ಬೆಂಗಳೂರು, ಮೇ 11, 2021 (..):ಶ್ರೀಲಂಕಾ ವಿರುದ್ಧ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗುತ್ತಿದೆ. ಹೀಗಾಗಿ ಟೀಂ ಇಂಡಿಯಾವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ ನಾಯಕತ್ವಕ್ಕೆ ಕೆಎಲ್ ರಾಹುಲ್, ಶಿಖರ್ ಧವನ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪೈಕಿ ನಾಯಕರಾಗಿ ಕೆಎಲ್ ರಾಹುಲ್ ಗೆ ಹೆಚ್ಚಿನ ಅನುಭವವಿದೆ. ಹೀಗಾಗಿ ಅವರೇ ನಾಯಕರಾಗುವ ಸಾಧ್ಯತೆ ಇದೆ. ರಿಷಬ್ ಪಂತ್ ಕೂಡಾ ರೇಸ್ ನಲ್ಲಿರಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿ ಅನುಭವ ಪಡೆದಿರುವ ರಿಷಬ್ ಗೆ ಭವಿಷ್ಯದ ದೃಷ್ಟಿಯಿಂದ ನಾಯಕತ್ವ ಕೊಟ್ಟರೂ ಅಚ್ಚರಿಯಿಲ್ಲ.