ಶೂಟಿಂಗ್ ಇಲ್ಲದೇ ಸಂಕಷ್ಟದಲ್ಲಿರುವ ಚಿತ್ರರಂಗ ಕಾರ್ಮಿಕರ ನೆರವಿಗೆ ನಿಂತ ಉಪೇಂದ್ರ ಬೆಂಗಳೂರು, ಮೇ 11, 2021 (..):ನಟ, ರಿಯಲ್ ಸ್ಟಾರ್ ಉಪೇಂದ್ರ ಚಿತ್ರರಂಗದ ಕಾರ್ಮಿಕರಿಗೆ ನೆರವಾಗಲು ಮುಂದೆ ಬಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಉಪೇಂದ್ರ ಅಗತ್ಯವಿದ್ದವರು ಕಾರ್ಮಿಕರ ಒಕ್ಕೂಟವನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ. ಚಿತ್ರೀಕರಣವಿಲ್ಲದೇ ಕಾರ್ಮಿಕರಿಗೆ ಊಟಕ್ಕೂ ತೊಂದರೆಯಾಗಿದೆ. ಹೀಗಾಗಿ ಕಾರ್ಮಿಕರಿಗೆ ದೈನಂದಿನ ದಿನಸಿ ಕಿಟ್ ನ್ನು ಕಾರ್ಮಿಕರ ಸಂಘದ ಮೂಲಕ ವಿತರಿಸಲಿದ್ದಾರೆ. ತಮಗೆ ದೇಣಿಗೆಯಾಗಿ ಬಂದ ಹಣವನ್ನು ಕಿರುತೆರೆ ಕಾರ್ಮಿಕರ ನೆರವಿಗೆ ಒದಗಿಸಲಿದ್ದಾರೆ.