ಮದುವೆಯಾದ ಒಂದೇ ತಿಂಗಳಿಗೆ ಗೃಹಿಣಿ ಅನುಮಾನಸ್ಪದ ಸಾವು… ಮೈಸೂರು,ಮೇ,8,2021(..):ಮದುವೆಯಾದ ಒಂದೇ ತಿಂಗಳಿಗೆ ಗೃಹಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಶ್ರೀರಾಂಪುರ ಎಸ್ ಬಿ ಎಂ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಆಶಾರಾಣಿ(28) ಮೃತ ಗೃಹಿಣಿ. ಮೂಲತಃ ನಂಜನಗೂಡು ತಾಲ್ಲೂಕಿನ ಸರಗೂರು ಗ್ರಾಮದವರು. ಒಂದು ತಿಂಗಳ ಹಿಂದಷ್ಟೆ ಆಶಾರಾಣಿ ಮತ್ತು ಟೆಕ್ಕಿ ಪ್ರದೀಪ್ ಎಂಬಾತನ ಜೊತೆ ವಿವಾಹವಾಗಿತ್ತು. ವರದಕ್ಷಿಣೆ ತರುವಂತೆ ಮಾನಸಿಕ, ದೈಹಿಕ‌ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ಮೃತ ಆಶಾರಾಣಿಯ ಪೋಷಕರು ಕುವೆಂಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿವಾಹದ ವೇಳೆ ವರನಿಗೆ 5 ಲಕ್ಷ ನಗದು 130 ಗ್ರಾಂ ಚಿನ್ನ ವರದಕ್ಷಿಣೆ ನೀಡಲಾಗಿತ್ತು. ಆದರೆ ಮೃತ ಆಶಾರಾಣಿಯ ಅತ್ತೆಮನೆಯವರು ಮತ್ತಷ್ಟು ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಆಶಾರಾಣಿ ಪತಿ ಪ್ರದೀಪ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. : - – -