ನೀವು ಉಳಿಯುತ್ತೀರೊ ಇಲ್ವೊ ಗೊತ್ತಿಲ್ಲ: ನಾನಂತು ಉಳಿಬೇಕು ಎಂದ ಸಚಿವ ಉಮೇಶ್ ಕತ್ತಿ… ಬಾಗಲಕೋಟೆ,ಮೇ,8,2021(..) :ಕೋವಿಡ್ ಮೂರನೇ ಅಲೆ ಬರುತ್ತೆ. ನೀವು ಉಳಿಯುತ್ತಿರೋ ಇಲ್ಲವೋ ಗೊತ್ತಿಲ್ಲ. ನಾನು ಉಳಿಯಬೇಕು ಎಂದು ಆಹಾರ ಸಚಿವ ಉಮೇಶ ಕತ್ತಿ ವ್ಯಂಗ್ಯವಾಗಿ ಹೇಳಿದರು. ಇಂದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ನಡೆದ ಸಭೆಯೊಂದರಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ಈ ರೀತಿ ಹೇಳಿಕೆ ನೀಡಿದ್ದಾರೆ. ಸ್ಥಳೀಯರು ಆಕ್ಷಿಜನ್ ಸಾಂದ್ರಕ ಯಂತ್ರವನ್ನು ಸರಕಾರಿ ಆಸ್ಪತ್ರೆಗೆ ದೇಣಿಗೆಯಾಗಿ ನೀಡಿದ್ದರು. ಈ ವೇಳೆ ರಬಕವಿಯ ಖಾಸಗಿ ವೈದ್ಯರೊಬ್ಬರು ಮಾತನಾಡುವ ಸಂದರ್ಭದಲ್ಲಿ, ಆಕ್ಸಿಜನ್ ಸಾಂದ್ರಕ ಯಂತ್ರಗಳನ್ನು ಸಹ ಸರ್ಕಾರ ಹೆಚ್ಚು ನೀಡಬೇಕು ಇದರಿಂದ ಕೋವಿಡ್ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು. ಆಗ ಸಚಿವರು ಮೂರನೇ ಅಲೆ ಬಂದ ಮೇಲೆ ನೋಡೋಣ ಎಂದರು. ಆಗ ವೈದ್ಯರು ಆವಾಗ ನಾವು ಉಳಿದರೆ ನೋಡೋಣ ಎಂದಾಗ ಸಚಿವರು ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು ಎಂದು ಹಾಸ್ಯಾಸ್ಪದವಾಗಿ ಹೇಳಿದರು. : -’ - – – -