ರಾಜ್ಯ ಬಿಜೆಪಿ ಸಂಸದರೇ ನಿಮಗೆ ತಾಕತ್ತಿದ್ದರೆ ಕೇಂದ್ರದಿಂದ ಹೆಚ್ಚಿನ ಆಕ್ಸಿಜನ್ ತರಿಸಿಕೊಳ್ಳಿ- ಡಾ. ಪುಷ್ಪ ಅಮರನಾಥ್ ವಾಗ್ದಾಳಿ… ಮೈಸೂರು,ಮೇ,7,2021(..):ರಾಜ್ಯದ ಬಿಜೆಪಿ ಸಂಸದರೇ ನಿಮಗೆ ತಾಕತ್ತು, ಧಮ್ಮು ಇದಿಯಾ. ತಾಕತ್ತು, ಧಮ್ಮು ಇದ್ದರೆ ಕೇಂದ್ರದಿಂದ ಹೆಚ್ಚಿನ ಆಕ್ಸಿಜನ್ ತರಿಸಿಕೊಳ್ಳಿ ಹೀಗೆ ವಾಗ್ದಾಳಿ ನಡೆಸಿದ್ದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಢಿ ನಡೆಸಿ ರಾಜ್ಯ ಬಿಜೆಪಿ ಸಂಸದರ ವಿರುದ್ಧ ಕಿಡಿಕಾರಿದ ಡಾ.ಪುಷ್ಪ ಅಮರನಾಥ್, ಕೋರೋನಾ ನಿಯಂತ್ರಣ ವಿಚಾರವಾಗಿ ಕೇಂದ್ರಕ್ಕೆ ಮನವರಿಕೆ ಮಾಡಿ. ಹೆಚ್ಚಿನ ಪರಿಹಾರದ ಜೊತೆಗೆ ಅಗತ್ಯ ಕ್ರಮಗಳನ್ನ ಪೂರೈಸುವುದಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಿ. ಥೂ ನಿಮ್ಮ‌ ಜನ್ಮಕ್ಕೆ ನಿಮಗೆಲ್ಲಾ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು. ಕೋರೋನಾ ನಿಯಂತ್ರಿಸುವಲ್ಲಿ ಯಡಿಯೂರಪ್ಪ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಡಾ.ಪುಷ್ಪ ಅಮರನಾಥ್, ಬಿಪಿಎಲ್ ಕಾರ್ಡುದಾರರ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಿ. ನಿಮಗೆ ತಾಕತ್ತು ಇದ್ದರೆ ಈ ಕೆಲಸ ಮಾಡಿ, ಇಲ್ಲವಾದಲ್ಲಿ ರಾಜೀನಾಮೆ ನೀಡಿ ಮನಗೆ ಹೋಗಿ ಎಂದ ಹರಿಹಾಯ್ದರು. : -- -- ---