ಕರೋನಾ ನಿಯಂತ್ರಣ : ಮೈಸೂರು ಜಿಲ್ಲಾಡಳಿತದ ‘ಪಂಚಸೂತ್ರ ‘ ಕ್ಕೆ ಸಾಥ್ ನೀಡಿದ ‘ ಜಿಂಗಲ್ ‘ ಮೈಸೂರು, ಮೇ 07, 2021 : (.. ) : ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಕರ್ನಾಟಕಕ್ಕೂ ಇದು ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕರೋನಾ ನಿಯಂತ್ರಣ ಸಂಬಂದ ‘ಪಂಚಸೂತ್ರ’ಗಳನ್ನು ಒಳಗೊಂಡ ‘ಜಿಂಗಲ್ ‘ ಒಂದನ್ನು ಸಿದ್ಧಪಡಿಸಿದ್ದಾರೆ. ಸ್ಯಾಂಡಲ್ ವುಡ್ ನ ಜನಪ್ರಿಯ ಗೀತೆಯಾದ ‘ ಆಡಿಸಿ ನೋಡು ಬೀಳಿಸಿ ನೋಡು…ಗೀತೆಯನ್ನೇ ಕರೋನಾ ನಿಯಂತ್ರಣದ ಜಾಗೃತಿ ಗೀತೆಯನ್ನಾಗಿ ಪರಿವರ್ತಿಸಿ ಜಿಂಗಲ್ ರೂಪದಲ್ಲಿ ಸಿದ್ಧಪಡಿಸಲಾಗಿದೆ. ಇದನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ಮೂಲಕ ಜನರಲ್ಲಿ ಕರೋನಾ ಜಾಗೃತಿ ಮೂಡಿಸುವುದು ಮೈಸೂರು ಜಿಲ್ಲಾಡಳಿತದ ಉದ್ದೇಶ. : – - ----. . . , (3Ts)