ಸುರೇಶ್ ರೈನಾ ಕುಟುಂಬಕ್ಕೆ ಆಕ್ಸಿಜನ್ ಸಿಲಿಂಡರ್ ರವಾನಿಸಿ ನೆರವಾದ ಸೋನು ಸೂದ್ ಬೆಂಗಳೂರು, ಮೇ 07, 2021 (..):ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ಸೋನು ಸೂದ್ ನೆರವಾಗಿದ್ದಾರೆ. ರೈನಾ ಚಿಕ್ಕಮ್ಮ ಆಕ್ಸಿಜನ್ ಸಿಲಿಂಡರ್ ಸಿಗದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಈ ಬಗ್ಗೆ ಸುರೇಶ್ ರೈನಾ ಟ್ವಿಟ್ಟರ್ ಮೂಲಕ ಸಹಾಯ ಕೋರಿದ್ದರು. ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಸಹಾಯ ಕೋರಿದ್ದರು ರೈನಾ. ಆದರೆ ಅವರು ನೆರವಿಗೆ ಬರಲಿಲ್ಲ. ಕೊನೆಗೆ ಆ ಟ್ವೀಟ್ ನೋಡಿದ ಸೋನು ಸೂದ್ 10 ನಿಮಿಷದಲ್ಲಿ ರೈನಾಗೆ ಸಿಲಿಂಡರ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ರೈನಾ ಟ್ವೀಟ್ ನೋಡಿದ ಸೋನು ಸೂದ್ ವಿಳಾಸ ನೀಡುವಂತೆ ಕೇಳಿಕೊಂಡು, ’10 ನಿಮಿಷದಲ್ಲೇ ಸಿಲಿಂಡರ್ ತಲುಪಲಿದೆ ಸಹೋದರ’ ಎಂದು ಭರವಸೆ ನೀಡಿದ್ದರು. ಅದರಂತೆ ನೆರವು ನೀಡಿದ್ದಾರೆ.