ದೇಶದಲ್ಲಿ ಒಂದೇ ದಿನ 4 ಲಕ್ಷಕ್ಕೂ ಅಧಿಕ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ… ನವದೆಹಲಿ,ಮೇ,6,2021(..)ದೇಶದಲ್ಲಿ ಕೊರೋನಾ ಎರಡನೇ ಅಲೆ ತಲ್ಲಣ ಮೂಡಿಸಿದ್ದು ದಿನೇ ದಿನೇ ಕೋವಿಡ್ ಸೋಂಕಿಣ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಮಧ್ಯೆ ಒಂದೇ ದಿನ ದೇಶದಲ್ಲಿ ಹೊಸದಾಗಿ 4 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಒಂದೇ ದಿನ 4,12,262 ಹೊಸ ಕರೋನ ಪ್ರಕರಣಗಳು ಧೃಡಪಟ್ಟಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 2,10,77,410ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 3,980 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 23,01,68ಕ್ಕೆ ಏರಿಕೆಯಾಗಿದೆ. 1,72,80,844 ಮಂದಿ ಕರೋನ ಸೊಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 1,72,80,844, ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 35,66,398, ಒಟ್ಟು ವ್ಯಾಕ್ಸಿನೇಷನ್ ತೆಗೆದುಕೊಂಡರವರ ಸಂಖ್ಯೆ 16,25,13,339 ಆಗಿದೆ. …. 4 24 ! , 6, 2021 (..): -19 . , 4 24 . , 4,12,262 2,10,77,410. 24 , 3,980 23,01,68.1,72,80,844 . 35,66,398 16,25,13,339 .: / -19 / 4 / 24 : -4 - - - –