ಕೊರೋನಾ ತಡೆಗೆ ಅಗತ್ಯವಿದ್ರೆ ಲಾಕ್ ಡೌನ್ ಗಿಂತಲೂ ಕಠಿಣ ಕ್ರಮ- ವಿ.ಕೆ ಪೌಲ್… ನವದೆಹಲಿ,ಮೇ,5,2021(..): ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ 2ನೇ ಅಲೆ ತಡೆಗೆ ಅಗತ್ಯವಿದ್ರೆ ಲಾಕ್ ಡೌನ್ ಗಿಂತಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ ಪೌಲ್ ತಿಳಿಸಿದ್ದಾರೆ. ಈ ಕುರಿತು ನವದೆಹಲಿಯಲ್ಲಿ ಮಾತನಾಡಿರುವ ವಿ.ಕೆ ಪೌಲ್, ಕೊರೋನಾ ಚೈನ್ ಲಿಕ್ ಕಟ್ ಮಾಡಲು ಈಗಾಗಲೇ ಕಠಿಣ ನಿಯಮಗಳ ಪಾಲನೆಗೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದರೇ ದೇಶದಲ್ಲಿ ಲಾಕ್ ಡೌನ್ ಗಿಂತಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. : - – = - .