ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜೀನಾಮೆಗೆ ಆಗ್ರಹಿಸಿದ ಶಾಸಕ ಎಂ.ಪಿ ರೇಣುಕಾಚಾರ್ಯ…. ದಾವಣಗೆರೆ, ಮೇ,5,2021(..):ಚಾಮರಾಜನಗರ ಆಸ್ಪತ್ರೆ ದುರಂತ, ಬಿಬಿಎಂಪಿ ಬೆಡ್ ಸಿಗದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ದಾವಣಗೆರೆ ಹೊನ್ನಾಳಿಯಲ್ಲಿ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಕೆಲ ಸಚಿವರು ತಮ್ಮ ಸ್ವಂತ ಕೆಲಸದಲ್ಲಿ, ಐಷಾರಾಮಿ ಜೀವನದಲ್ಲಿ ಬ್ಯುಸಿ ಇರ್ತಾರೆ. ಆದರೆ ಜನರನ್ನ ರಕ್ಷಣೆ ಮಾಡುವ ಕೆಲಸ ಆಗ್ತಾ ಇಲ್ಲ. ಕೆಲಸ ಮಾಡೋಕೆ ಆಗದೆ ಇದ್ದರೆ ಗೌರವಯುತವಾಗಿ ಮನೆಗೆ ಹೋಗಿ ಎಂದು ಕಿಡಿಕಾರಿದರು. ಈ ರೀತಿ ಕೆಲಸ ಮಾಡೋಕಾ ಇವರು ಎರಡು ಹುದ್ದೇ ಪಡೆದಿದ್ದು. ಪ್ರಧಾನಿ ಮೋದಿ.. ಬಿಎಸ್ ಯಡಿಯೂರಪ್ಪ ಅವರು ಹಗಲಿರುಳು ಕೆಲಸ ಮಾಡುತಿದ್ದಾರೆ ಇವರಿಗೇನಾಗಿದೆ. ರಾಜೀ‌ನಾಮೆ ಕೊಟ್ಟು ಮನೆಗೆ ಹೋಗಿ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದರು. : - - – - .