ಆಸಿಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಪುತ್ರಿಯರಿಂದ ಅಪ್ಪನಿಗೆ ಬಂದ ಸಂದೇಶ ವೈರಲ್! ಬೆಂಗಳೂರು, ಮೇ 05, 2021 (..):ಡೇವಿಡ್‌ ವಾರ್ನರ್‌ ಅವರ ಪುತ್ರಿಯರ ಸಂದೇಶವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಐಪಿಎಲ್ ರದ್ದಾಗಿರುವ ಹಿನ್ನೆಲೆಯಲ್ಲಿ ವಾರ್ನರ್ ಪುತ್ರಿಯರು ಅಪ್ಪನಿಗೆ ಸಂದೇಶವೊಂದನ್ನು ಕಳುಹಿಸಿ ಬೇಗನೇ ಮನೆಗೆ ಮರಳುವಂತೆ ಕೇಳಿಕೊಂಡಿದ್ದಾರೆ. “ಪ್ಲೀಸ್‌ ಡ್ಯಾಡಿ, ಬೇಗ ಮನೆಗೆ ಬನ್ನಿ. ವೀ ಮಿಸ್‌ ಯೂ ಆಯಂಡ್‌ ಲಾಟ್‌ ಆಯಂಡ್‌ ಲವ್‌ ಯೂ. ಲವ್‌ ಫ್ರಾಮ್‌ ಐವಿ, ಇಂಡಿ ಆಯಂಡ್‌ ಇಸ್ಲಾ…’ ಎಂಬ ಸಂದೇಶ ವಾರ್ನರ್ ಗೆ ಕಳುಹಿಸಿದ್ದಾರೆ.