ಚಾಮರಾಜನಗರ ಆಕ್ಸಿಜನ್ ದುರಂತ: ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶ… ಬೆಂಗಳೂರು, ಮೇ,5,2021(..):ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ರೋಗಿಗಳು ಸಾವನ್ನಪ್ಪಿದ ಪ್ರಕರಣವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ನಿವೃತ್ತ ನ್ಯಾ. ಬಿ.ಎ ಪಾಟೀಲ್ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು 1 ತಿಂಗಳಲ್ಲಿ ವರದಿ ನೀಡಲಿದ್ದಾರೆ. ಏಕಸದಸ್ಯ ತನಿಖಾ ಆಯೋಗ ಕಾರ್ಯನಿರ್ವಹಣೆ ಮಾಡಲಿದೆ. ಇನ್ನು ಆಕ್ಸಿಜನ್ ಸಾಗಾಟಕ್ಕೆ ಸಂಬಂಧಿಸಿದ ಚಾಮರಾಜನಗರ ಜಿಲ್ಲಾಸ್ಪತ್ರೆಯ ದಾಖಲೆ, ಜಿಲ್ಲಾಧಿಕಾರಿ ಕಚೇರಿಯ ದಾಖಲೆ ಹಾಗೆಯೇ ಮೈಸೂರು ಡಿಸಿ ಕಚೇರಿಯ ದಾಖಲೆಗಳನ್ನು ಸೀಜ್ ಮಾಡಲು ಹೈಕೋರ್ಟ್ ವಿಭಾಗೀಯ ಪೀಠ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. ಸೀಜ್ ಆದ ದಾಖಲೆಗಳನ್ನ ವಿಚಾರಣಾಧಿಕಾರಿ ಪರಿಶೀಲಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ತಿಳಿಸಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆ ಆಕ್ಸಿಜನ್ ದುರಂತ ಪ್ರಕರಣ ನ್ಯಾಯಾಂಗ ತನಿಖೆ ಅಗತ್ಯ. ಈ ಬಗ್ಗೆ ತಮ್ಮ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು. … : . , 5, 2021 (..): 24 . .. 1 . - . ’ , . ’ . ’ . .: ’ / / / : - –-- - - .