ಟ್ವಿಟ್ಟರ್ ಅಕೌಂಟ್ ಸಸ್ಪೆಂಡ್: ಮೂರು ಮಿಲಿಯನ್ ಫಾಲೋವರ್ಸ್ ಕಳೆದುಕೊಂಡ ಕಂಗನ ಬೆಂಗಳೂರು, ಮೇ 05, 2021 (..):ನಟಿ ಕಂಗನಾ ಟ್ವೀಟರ್ ನಲ್ಲಿ ಸುಮಾರು ಮೂರು ಮಿಲಿಯನ್ ಫಾಲೋವರ್ಸ್ಗಳನ್ನು ಕಳೆದುಕೊಂಡಿದ್ದಾರೆ. ಬಂಗಾಳದಲ್ಲಿ ಪ್ರಧಾನಿ ಮೋದಿಯವರು ಗೂಂಡಾಗಳ ಮೇಲೆ ದಾಳಿ ಮಾಡುವಲ್ಲಿ ತಮ್ಮ ಶಕ್ತಿಯನ್ನು ತೋರಿಸಬೇಕೆಂದು ಟ್ವಿಟ್ಟರ್ ನಲ್ಲಿ ವಿನಂತಿಸಿದ್ದಾರೆ. ಹೀಗಾಗಿ ಅವರ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗಿದೆ. ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ಬಳಿಕ ವಿವಾದತ್ಮಕ ಟ್ವೀಟ್ ಮಾಡಿ ಹಿಂಸಾಚಾರಕ್ಕೆ ಕಾರಣವಾದ ಹಿನ್ನಲೆಯಲ್ಲಿ ನಟಿ ಕಂಗನಾ ರನೌತ್ ಅವರ ಟ್ವೀಟರ್ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗಿದೆ. ಆದರೆ ಅವರ ಇನ್ ಸ್ಟಾಗ್ರಾಂ ಖಾತೆ ಕಾರ್ಯನಿರತವಾಗಿದೆ.