ಕ್ರಿಕೆಟಿಗನಿಗೆ ಕೋವಿಡ್ ದೃಢ: ಆರ್ಸಿಬಿ-ಕೆಕೆಆರ್ ಪಂದ್ಯ ಮುಂದೂಡಿಕೆ ಬೆಂಗಳೂರು, ಮೇ 03, 2021 (..):ರಾಯಲ್ ಚಾಲೆಂಜರ್ಸ್ ಬೆಂಗಳೂರು () ಮತ್ತು ಕೋಲ್ಕತಾ ನೈಟ್ ರೈಡರ್ಸ್ () ನಡುವಿನ ಇಂದಿನ ಐಪಿಎಲ್ ಪಂದ್ಯವನ್ನು ಮುಂದೂಡಲಾಗಿದೆ. ಬಯೋ ಬಬಲ್​ನಲ್ಲಿ ಇರುವ ಓರ್ವ ಕ್ರಿಕೆಟ್ ಆಟಗಾರನಿಗೆ ಕೊವಿಡ್ ಸೋಂಕು ದೃಢಪಟ್ಟಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪಂದ್ಯ ಮುಂದೂಡುವ ನಿರ್ಧಾರ ಹೊರ ಬಿದ್ದಿದೆ. ಕೊವಿಡ್ ಭೀತಿಯ ಕಾರಣ ಇಂದಿನ ಐಪಿಎಲ್ ಪಂದ್ಯ ಮುಂದೂಡಲಾಗಿದೆ.