ಪಿಣರಾಯಿ ವಿಜಯನ್ ಲಕ್! ಕೇರಳದಲ್ಲಿ ಸತತ 2 ನೇ ಬಾರಿಗೆ ಎಲ್ ಡಿಎಫ್’ಗೆ ಮಣೆ ಹಾಕಿದ ಮತದಾರ ಕೊಚ್ಚಿ, ಮೇ 02, 2021 (..): ಕೇರಳದಲ್ಲಿ ಸತತವಾಗಿ 2 ನೇ ಬಾರಿಗೆ ಎಲ್ ಡಿಎಫ್ ಅಧಿಕಾರದ ಗದ್ದುಗೆ ಏರುವ ಲಕ್ಷಣಗಳು ಘೋಚರವಾಗುತ್ತಿವೆ. ಸದ್ಯದ ಮಾಹಿತಿ ಪ್ರಕಾರ ಕೇರಳ ವಿಧಾನಸಭಾ ಚುನಾವಣೆಮತ ಎಣಿಕೆಯಲ್ಲಿ ಎಲ್ ಡಿಎಫ್ 76 ಸ್ಥಾನಗಳಲ್ಲಿ, ಯುಡಿಎಫ್ 47 ರಲ್ಲಿ ಮತ್ತು ಎನ್ ಡಿಎ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಕೇರಳ ವಿಧಾನಸಭೆ ಚುನಾವಣೆ ನಿಕಟ ಫಲಿತಾಂಶ ಹೊರ ಬೀಳುತ್ತಿದೆ. ಕೇರಳದಲ್ಲಿ ಸತತವಾಗಿ 2 ನೇ ಬಾರಿಗೆ ಕೇರಳ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ.