ಆಕ್ಸಿಜನ್ ಪೂರೈಕೆಯಾಗದೆ 23 ಮಂದಿ ಸಾವು ವಿಚಾರ: ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ ಸ್ಪಷ್ಟನೆ ನೀಡಿದ್ದು ಹೀಗೆ…. ಚಾಮರಾಜನಗರ,ಮೇ,3,2021(..):ಆಕ್ಸಿಜನ್ ಸಮಸ್ಯೆಯಿಂದ 23 ಮಂದಿ ರೋಗಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ, ಮೈಸೂರಿನಿಂದ ಸಕಾಲದಲ್ಲಿ ಆಕ್ಸಿಜನ್ ಪೂರೈಕೆಯಾಗಿಲ್ಲ. ಸಾವನಪ್ಪಿರುವವರು ಯಾವುದರ ಕೊರತೆಯಿಂದ ಸಾವನಪ್ಪಿದ್ದಾರೆ ಎಂಬ ವರದಿ ತರಿಸುವೆ ಎಂದು ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಚಾಮರಾಜನಗರ ಡಿಸಿ ಎಂ.ಆರ್ ರವಿ, ಜಿಲ್ಲಾಸ್ಪತ್ರೆಯಲ್ಲಿ ೧೨೦ ಹಾಸಿಗೆ ಇವೆ. ನಮ್ಮ ಬಳಿ ೩೫೦ ಆಕ್ಸಿಜನ್ ಸಿಲಿಂಡರ್ ಇವೆ. ದಿನವೊಂದಕ್ಕೆ ೨೪೦ ಸಿಲಿಂಡರ್ ಅವಶ್ಯಕತೆ ಇದೆ. ಅಗತ್ಯಕ್ಕೆ ಅನುಗುಣವಾಗಿ ಸಿಲಿಂಡರ್ ಪೂರೈಕೆ ಆಗಿಲ್ಲ ಎಂದು ತಿಳಿಸಿದರು. ಸರ್ಕಾರ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದೇನೆ. ರಾತ್ರಿ 50 ಸಿಲಿಂಡರ್ ಬಂದಿವೆ. ಬೆಳಗ್ಗೆ 30 ಸಿಲಿಂಡರ್ ಬಂದಿವೆ. 10 ಗಂಟೆಯ ಬಳಿಕ ಆಕ್ಸಿಜನ್ ಟ್ಯಾಂಕರ್ ಬಳ್ಳಾರಿಯಿಂದ ಬರಲಿದೆ. ಇಂದಿನಿಂದ ಆಕ್ಸಿಜನ್ ಸಮಸ್ಯೆ ಜಿಲ್ಲೆಯಲ್ಲಿ ಬಗೆಹರಿಯಲಿದೆ ಎಂದು ಚಾಮರಾಜನಗರ ಎಂ.ಆರ್ ರವಿ ತಿಳಿಸಿದರು. 23 . , 3, 2021 (..): , 23 , . .. 223 . , .. 120 350 . 240 .“ . 50 30 . 10 . ,” .: / .. / 23 / / : - 22 –- –