ತಮಿಳುನಾಡಿನಲ್ಲಿ ಸೂರ್ಯೋದಯ! ಸಿಎಂ ಪಟ್ಟದತ್ತ ಸ್ಟಾಲಿನ್ ಹೆಜ್ಜೆ ಚೆನ್ನೈ, ಮೇ 02, 2021 (..):ತಮಿಳುನಾಡಿನಲ್ಲಿ ಡಿಎಂಕೆ ಭಾರಿ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಈ ಬಾರಿ ಎಂ.ಕೆ.ಸ್ಟಾಲಿನ್ ತಮಿಳುನಾಡು ಸಿಎಂ ಪಟ್ಟ ಅಲಂಕರಿಸುವುದು ಖಚಿತವಾಗುತ್ತಿದೆ. 233 ಕ್ಷೇತ್ರಗಳಲ್ಲಿ ಡಿಎಂಕೆ 153 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮ್ಯಾಜಿಕ್ ಸಂಖ್ಯೆ 118 ಸ್ಥಾನಗಳನ್ನು ದಾಟಿದೆ. ಆಡಳಿತಾರೂಢ ಎಐಎಡಿಎಂಕೆ ಭಾರಿ ಹಿನ್ನಡೆ ಸಾಧಿಸಿದ್ದು, 104 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ತಮಿಳುನಾಡಿನ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಕೇವಲ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಮುರುಗನ್ ಮಾತ್ರ ಮುನ್ನಡೆ ಕಾಯ್ದುಕೊಂಡಿದ್ದಾರೆ.