ನನಗೆ ವಿಶ್ವಾಸದ್ರೋಹವಾಗಿದೆ: ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ … ಮಸ್ಕಿ,ಮೇ,2,2021(..):ಭಾರಿ ಕುತೂಹಲ ಮೂಡಿಸಿರುವ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರುವಿಹಾಳ ಗೆಲುವು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಈ ಮೂಲಕ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದ ಪ್ರತಾಪ್ ಗೌಡ ಪಾಟೀಲ್ ಗೆ ಮುಖಭಂಗವಾಗಿದೆ. ಫಲಿತಾಂಶ ಬಳಿಕ ಈ ಕುರಿತು ಮಾತನಾಡಿರುವ ಪ್ರತಾಪ್ ಗೌಡ ಪಾಟೀಲ್, ನನಗೆ ಸೋಲಾಗಲ್ಲ ಎಂದುಕೊಂಡಿದ್ದೆ. ಆದರೆ ವಿಶ್ವಾಸದ್ರೋಹವಾಗಿದೆ. ಅಭಿವೃದ್ಧಿ, ಒಳ್ಳೆತನ ಮುಖ್ಯವಲ್ಲ ಎಂದು ಜನ ಸಾಬೀತು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನ ಬದಲಾವಣೆ ಬಯಸಿ, ಕಾಂಗ್ರೆಸ್ ನ ಬಸವನಗೌಡ ತುರುವಿಹಾಳಗೆ ಮತಹಾಕಿದ್ದಾರೆ. ಕ್ಷೇತ್ರದ ಜನತೆಗೆ ದೇವರು ಒಳ್ಳೆಯದು ಮಾಡಲಿ. ಜನರ ಮನಸ್ಥಿತಿಯಲ್ಲಿ ಸೋಲಿಸಬೇಕೆಂಬುದು ಬಂದಾಗ ಯಾರು ಬಂದು ಏನೇ ಪ್ರಚಾರ ಮಾಡಿದರೂ ಏನೂ ಪ್ರಯೋಜನ ಆಗಲ್ಲ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. : –- - - .