ರಷ್ಯಾದಿಂದ ಭಾರತಕ್ಕೆ ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ ಆಗಮನ… ಹೈದರಾಬಾದ್ ,ಮೇ,1,2021(..): ರಷ್ಯಾದಿಂದ ಭಾರತಕ್ಕೆ ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ ಆಗಮಿಸಿದೆ. ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಇದೀಗ ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ, ಇಂದು ಹೈದರಾಬಾದ್ ಗೆ ಆಗಮಿಸಿದೆ. ಇಂದು 1.5 ಲಕ್ಷ ಡೋಸ್ ದೇಶಕ್ಕೆ ಬಂದಿದೆ ಎನ್ನಲಾಗಿದೆ. ಕೊರೋನಾ ಸೋಂಕಿನ 2ನೇ ಅಲೆಯ ಅಬ್ಬರದಲ್ಲಿರುವ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಕೊರೋನಾ ಲಸಿಕಾ ಅಭಿಯಾನ ಹೆಚ್ಚುಗೊಳಿಸಲಾಗಿತ್ತು. ದೇಶೀಯ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಜೊತೆಗೆ, ವಿದೇಶದಿಂದಲೂ ಲಸಿಕೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. : – - -- - –- .