ಲವ್ ಮಾಕ್ಟೇಲ್ ಮತ್ತೊಂದು ಸಾಂಗ್ ರಿಲೀಸ್ ಇಂದು ಬೆಂಗಳೂರು, ಮೇ 01, 2021 (..):ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸುತ್ತಿರುವ ಲವ್ ಮಾಕ್ಟೇಲ್ ಸಿನಿಮಾದ ಮತ್ತೊಂದು ಹಾಡು ಇಂದು ರಿಲೀಸ್ ಆಗುತ್ತಿದೆ. ಅಂದಹಾಗೆ ನಕುಲ್ ಅಭಯಂಕರ್ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಲವ್ ಮಾಕ್ಟೇಲ್ ಮೊದಲ ಭಾಗದ ಹಾಡುಗಳು ಕೂಡ ಅಭಿಮಾನಿಗಳ ಕಿವಿಗೆ ಇಂಪು ನೀಡಿದ್ದವು. ಇತ್ತೀಚೆಗಷ್ಟೇ ಕೊರೋನಾ ಗೆದ್ದ ಖುಷಿಹಂಚಿಕೊಂಡಿದ್ದ ಕೃಷ್ಣ-ಮಿಲನಾ ದಂಪತಿ ಈಗ ಅಭಿಮಾನಿಗಳಿಗೆ ಮತ್ತೊಂದು ಖುಷಿ ಕೊಡಲಿದ್ದಾರೆ. ಈಗ ಈ ಪ್ರೇಮ ಎಂಬ ಹಾಡು ಬಿಡುಗಡೆಯಾಗುತ್ತಿದೆ.