ಮೈಸೂರು ಜಿಲ್ಲೆಗೆ ೨೦ ಕೆಎಲ್‌ನಷ್ಟು ಹೆಚ್ಚುವರಿ ಆಮ್ಲಜನಕ ಸರಬರಾಜಿಗೆ ಮನವಿ ಮಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ. ಮೈಸೂರು, ಮೇ ೧, ೨೦೨೧ (..): ಮೈಸೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಆತಂಕ ಹೆಚ್ಚಾಗಿದ್ದು, ಲಸಿಕೆಗಳು, ಚುಚ್ಚುಮದ್ದು, ಆಮ್ಲಜನಕ, ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಔಷಧಗಳ ಅಭಾವವೂ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತವು ಮೈಸೂರಿನ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಮ್ಲಜನಕಸಹಿತದ ಹಾಸಿಗೆಗಳ ಸಂಖ್ಯೆಯನ್ನು ೫೦೦ಕ್ಕೆ ಹೆಚ್ಚಿಸುವುದರ ಜೊತೆಗೆ ಇತರೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಇದರ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆ ರೂಪಿಸಿದೆ. ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಾಗೂ ರಾಜ್ಯ ವೈದ್ಯಕೀಯ ಆಮ್ಲಜನಕ ಸರಬರಾಜು ಸಮಿತಿಯ ನೋಡಲ್ ಅಧಿಕಾರಿಗೆ ಪತ್ರ ಬರೆದಿದ್ದು, ಮೈಸೂರು ಜಿಲ್ಲೆಗೆ ಪ್ರತಿ ದಿನಕ್ಕೆ ೨೦ ಕೆಎಲ್ ಆಮ್ಲಜನಕದ ಅಗತ್ಯವಿರುವ ಕುರಿತು ವಿವರಿಸಿ, ಕೂಡಲೇ ಹೆಚ್ಚುವರಿ ಆಮ್ಲಜನಕವನ್ನು ಪೂರೈಸುವಂತೆ ಕೋರಿದೆ. ಈವರೆಗೆ ಮೈಸೂರು ಜಿಲ್ಲೆಗೆ ಅಗತ್ಯತೆಯ ಪ್ರಕಾರ ಮೂರು ದಿನಗಳಿಗೊಮ್ಮೆ ಬಳ್ಳಾರಿಯ ಮೆ. ಪ್ರಾಕ್ಸಿರ್ ಇಂಡಿಯಾ ಪ್ರೈ.ಲಿ.ನಿಂದ ಅಂದಾಜು ೧೫ ಕೆಎಲ್ ಹಾಗೂ ಮೆ. ಭೋರುಖಾ ಗ್ಯಾಸಸ್ ಲಿ, ಬೆಂಗಳೂರಿನಿಂದ ೧೦ ಕೆಎಲ್‌ನಷ್ಟು ಆಮ್ಲಜನಕ ಪೂರೈಕೆಯಾಗುತಿತ್ತು. ಒಟ್ಟು ೨೪ ಕೆಎಲ್ ನಷ್ಟು ಆಮ್ಲಜನಕವನ್ನು ಮೈಸೂರು ಹಾಗೂ ನೆರೆಯ ಜಿಲ್ಲೆಗಳ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಒದಗಿಸಲಾಗುತಿತ್ತು. : - --. : , , 15 . , 10 . . 24 . -19 , & 500 , 20KL/ . , 26 ; 2021, - -01--8351 15.5 /. , , 5KL , , 10.5 . . 20KL .