ವೈರಲ್ ಆದ # ಬ್ಲಾಕ್ : ಅಡಚಣೆಗೆ ಕ್ಷಮಿಸಿ ಎಂದ ಫೇಸ್ ಬುಕ್…. ನವದೆಹಲಿ,ಏಪ್ರಿಲ್,30,2021(..):ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ತಡೆಗಟ್ಟಲು, ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿ ಫೇಸ್‌ಬುಕ್‌, ಟ್ವಿಟ್ಟರ್ ನಲ್ಲಿ # ಹ್ಯಾಷ್‌ ಟ್ಯಾಗ್‌ನಲ್ಲಿ ಮಾಡಿರುವ ಪೋಸ್ಟ್‌ಗಳು ಸಾಕಷ್ಟು ವೈರಲ್ ಆಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯದಿಂದಲೇ ದೇಶದಲ್ಲಿ ಕೊರೋನಾ ತೀವ್ರವಾಗಿ ಹರಡುತ್ತಿದೆ. ಇದರ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಹೊರಬೇಕು. ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್ ಟ್ಯಾಗ್ ಮಾಡಿ ಅಭಿಯಾನ ನಡೆಯುತ್ತಿದೆ. ಇನ್ನು # ಹ್ಯಾಷ್‌ ಟ್ಯಾಗ್‌ನಲ್ಲಿ ಪೋಸ್ಟ್ ಗಳು ವೈರಲ್ ಆಗುತ್ತಿದ್ದ ಬೆನ್ನಲ್ಲೆ, ಫೇಸ್ ಬುಕ್ ಆ ಪೋಸ್ಟ್ ಗಳನ್ನ ತೆಗೆದು ಹಾಕಿತ್ತು. ಪೋಸ್ಟ್ ಮಾಡಿದ್ದವರಲ್ಲಿ ಹಲವರ ಖಾತೆಗಳನ್ನೂ ತಾತ್ಕಾಲಿಕ ಅವಧಿಯವರೆಗೆ ಬ್ಲಾಕ್ ಮಾಡಲಾಗಿತ್ತು. ಫೇಸ್‌ಬುಕ್‌ ನ ಈ ಕ್ರಮವನ್ನು ಖಂಡಿಸಿ ಮತ್ತೆ ಸಾವಿರಾರು ಮಂದಿ ಪೋಸ್ಟ್ ಮಾಡಿದರು. ತಮ್ಮ ಪೋಸ್ಟ್‌ಗಳು ಬ್ಲಾಕ್ ಆಗಿರುವ ಸ್ಕ್ರೀನ್‌ ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಆರಂಭಿಸಿದರು. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಫೇಸ್‌ಬುಕ್‌ ಈ ಕ್ರಮ ತೆಗೆದುಕೊಂಡಿದೆ ಎಂದು ಹಲವರು ಆರೋಪಿಸಿದ್ದು, ಈ ಮೂಲಕ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಫೇಸ್ ಬುಕ್ ಆ ಪೋಸ್ಟ್ ಗಳನ್ನು ಲಭ್ಯವಾಗುವಂತೆ ಮಾಡಿದೆ. ತನ್ನ ಕ್ರಮಕ್ಕೆ ಭಾರಿ ಆಕ್ಷೇಪ ವ್ಯಕ್ತವಾದ ಕಾರಣ, ಫೇಸ್‌ಬುಕ್‌ ಗುರುವಾರ ಬೆಳಿಗ್ಗೆ ವೇಳೆಗೆ ಆ ಪೋಸ್ಟ್‌ಗಳನ್ನು ಅನ್‌ಬ್ಲಾಕ್‌ ಮಾಡಿತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಫೇಸ್ ಬುಕ್, ‘ಸರ್ಕಾರದ ಆದೇಶದ ಮೇರೆಗೆ ನಾವು ಈ ಕ್ರಮ ತೆಗೆದುಕೊಂಡಿಲ್ಲ. ತಾಂತ್ರಿಕ ಮತ್ತು ವಿಶ್ಲೇಷಣೆಯಲ್ಲಿ ಆದ ತಪ್ಪಿನಿಂದ ಪೋಸ್ಟ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿತ್ತು. ಈಗ ಅವನ್ನು ಅನ್‌ಬ್ಲಾಕ್‌ ಮಾಡಲಾಗಿದೆ’ ಎಂದು ಫೇಸ್‌ಬುಕ್‌ ಹೇಳಿಕೆ ನೀಡಿದೆ ಮೊದಲು ಟ್ವಿಟರ್‌ನಲ್ಲಿ # ಹ್ಯಾಷ್‌ಟ್ಯಾಗ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಒತ್ತಾಯಿಸಲಾಗಿತ್ತು. ಫೇಸ್‌ಬುಕ್‌ ಪೋಸ್ಟ್‌ಗಳನ್ನು ಬ್ಲಾಕ್ ಮಾಡಿದ ನಂತರ ಟ್ವಿಟರ್‌ನಲ್ಲಿಯೂ # ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಲಾಗುತ್ತಿದೆ. ಟ್ವಿಟರ್‌ನಲ್ಲಿ # ಹ್ಯಾಷ್‌ಟ್ಯಾಗ್‌ನಲ್ಲಿ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ. : – #- -