ಮೈಸೂರಿನಲ್ಲಿ ಮಿತಿ ಮೀರಿದ ವಾಹನಗಳ ಸಂಚಾರ : 300 ವಾಹನಗಳನ್ನ ಸೀಜ್ ಮಾಡಿದ ಪೊಲೀಸರು… ಮೈಸೂರು,ಏಪ್ರಿಲ್,30,2021(..):ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಸಹ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವಾಹನಗಳ ಸಂಚಾರ ಮಿತಿ ಮೀರಿದ ಹಿನ್ನೆಲೆ ಬರೊಬ್ಬರಿ 300 ವಾಹನಗಳನ್ನ ಮೈಸೂರು ಪೊಲೀಸರು ಸೀಜ್ ಮಾಡಿದ್ದಾರೆ. ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶವಿದ್ದು ನಂತರ ಎಲ್ಲವೂ ಬಂದ್ ಆಗಬೇಕು. ಆದರೆ ಮೈಸೂರಿನಲ್ಲಿ ಐಡಿ ಕಾರ್ಡ್, ಮೆಡಿಕಲ್ ಚೀಟಿ ಹಿಡಿದು ಜನರು ಹೊರಗೆ ಬರುತ್ತಿದ್ದು, ಮಾರ್ಕೆಟ್‌ಗೆ ಬಂದೆ, ಇಂಜೆಕ್ಷನ್‌ಗೆ ಬಂದೆ ಎಂದು ಕುಂಟು ನೆಪ ಹೇಳಿತ್ತಿರುವ ಜನರಿಗೆ ಇದೀಗ ಪೊಲೀಸರು ಶಾಕ್ ನೀಡಿದ್ದಾರೆ. ಅನಗತ್ಯವಾಗಿ ಓಡಾಡುತ್ತಿದ್ದ ಹಿನ್ನೆಲೆ ಮೈಸೂರು ನಗರ ಪೊಲೀಸರು ಬರೊಬ್ಬರಿ 300 ವಾಹನ ಸೀಜ್ ಮಾಡಿದ್ದು, ನಗರದಾದ್ಯಂತ ಎಲ್ಲ ಮುಖ್ಯ ರಸ್ತೆ ಬಂದ್ ಮಾಡಿದ್ದಾರೆ. ಹೀಗಾಗಿ ಆಸ್ಪತ್ರೆಯ ಆಯುರ್ವೇದಿಕ್ ಸರ್ಕಲ್ ಮೂಲಕವೇ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ನಗರದಲ್ಲಿ ಎಮರ್ಜೆನ್ಸಿಗಾಗಿ ವಾಹನ ಸಂಚಾರ ಆಗ್ತಿದೆ. ಕೆಲವರು ಅನಗತ್ಯವಾಗಿ ಹೊರಗೆ ಬರ್ತಿದ್ದಾರೆ. ಅಂತವರ ವಾಹನವನ್ನ ಈಗಾಗಲೇ ಸೀಜ್ ಮಾಡಿದ್ದೇವೆ. ಅನಗತ್ಯವಾಗಿ ಹೊರಗೆ ಬಾರದಂತೆ ಸೂಚನೆ ಕೊಟ್ಟಿದ್ದೇವೆ. ಆದರೂ ಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಬಹುತೇಕ ಎಲ್ಲಾ ಕಡೆ ಕರ್ಪ್ಯೂ ಚೆನ್ನಾಗಿಯೇ ಇದೆ. ನಾವು ಪ್ರಮುಖ ರಸ್ತೆ ಬಂದ್ ಮಾಡಿದ್ದೇವೆ. ತೀರ ಅವಶ್ಯಕತೆ ಇರೋರು, ವಿನಾಯಿತಿ ಇರುವ ಸೆಕ್ಟರ್ ಗಳ ಸಿಬ್ಬಂದಿ ಓಡಾಟ ಇದೆ. ಅದಕ್ಕೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. … : 300 , . 30, 2021 (..): . , 300 . 6.00 10.00 . , , . . , 300 . , .. . . . . . . . . , .: / / 300 : – -- – 300