ಕೋವಿಡ್ ಸಂಕಷ್ಟಕ್ಕೆ ಮಿಡಿದ ಕ್ರಿಕೆಟಿಗರು, ಸಚಿನ್ ಸೇರಿದಂತೆ ಹಲವರಿಂದ ನೆರವು ಬೆಂಗಳೂರು, ಏಪ್ರಿಲ್ 30, 2021 (..): ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಒದಗಿಸಲು ಸಚಿನ್ ತೆಂಡೂಲ್ಕರ್ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಕೋವಿಡ್ ವಿರುದ್ಧದ ಹೋರಾಟಕ್ಕೆ ರಾಜಸ್ಥಾನ ರಾಯಲ್ಸ್ 7.5 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಮೊನ್ನೆಯಷ್ಟೇ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ಕೂಡ ಪ್ರಧಾನಮಂತ್ರಿ ಪರಿಹಾರ ನಿಧಿಗೆ 40 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಆಟಗಾರ ಆಸ್ಟ್ರೇಲಿಯಾದ ಬ್ಯಾಟ್ ಕಮಿನ್ಸ್ ಅವರು ಆಕ್ಸಿಜನ್ ಸಿಲಿಂಡರ್ ಖರೀದಿಸಲು 37 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ದೆಹಲಿ -ಎನ್.ಸಿ.ಆರ್. ಮೂಲದ ನಿಧಿ ಸಂಗ್ರಹ ಸಂಸ್ಥೆಯಾಗಿರುವ ಮಿಷನ್ ಆಕ್ಸಿಜನ್ ಸಂಸ್ಥೆಗೆ ಸಚಿನ್ ನೆರವು ನೀಡಿದ್ದಾರೆ.