4, 4, 4, 4, 4, 4 ಐಪಿಎಲ್ ಇತಿಹಾಸಲದಲ್ಲಿ ಹಿಸ ದಾಖಲೆ ಬರೆದ ಪೃಥ್ವಿ ಶಾ ! ಬೆಂಗಳೂರು, ಏಪ್ರಿಲ್ 30, 2021 (..): ಪೃಥ್ವಿ ಶಾ 6 ಎಸೆತಗಳಲ್ಲಿ ಸತತ 6 ಬೌಂಡರಿ ಬಾರಿಸಿ ದಾಖಲೆ ಬರೆದಿದ್ದಾರೆ. ಅಹಮದಾಬಾದ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡದ ಶಿವಂ ಮವಿ ಬೌಲಿಂಗ್ ನಲ್ಲಿ ಪೃಥ್ವಿ ಶಾ ಸತತ 6 ಬೌಂಡರಿ ಬಾರಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಮೊದಲ ಓವರ್ ನಲ್ಲಿ ಸತತ 6 ಬೌಂಡರಿ ಬಾರಿಸಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು. ಶಿವಂ ದುಬೆ 25 ರನ್ ನೀಡುವ ಮೂಲಕ ಮೊದಲ ಓವರ್ ನಲ್ಲಿ ಅತ್ಯಂತ ಮೂರನೇ ದುಬಾರಿ ಬೌಲರ್ ಎನಿಸಿಕೊಂಡರು.